ವಿಜಯಸಾಕ್ಷಿ ಸುದ್ದಿ, ನರಗುಂದ
ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಸಂಸ್ಥೆ ಮೈಸೂರು, ಜಿಲ್ಲಾ ಪಂಚಾಯತಿ ಗದಗ, ತಾಲೂಕು ಪಂಚಾಯತಿ ನರಗುಂದ ಇವರ ಸಹಯೋಗದಲ್ಲಿ ನೂತನವಾಗಿ ಆಯ್ಕೆಯಾದ ಗ್ರಾಮ ಪಂಚಾಯತ ಸದಸ್ಯರಿಗೆ ಸಾಮರ್ಥ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮ ತಾಲೂಕು ಪಂಚಾಯತ ಸಭಾಭವನದಲ್ಲಿ ಜರುಗಿತು.
ಚಿಕ್ಕನರಗುಂದ, ವಾಸನ, ಶಿರೋಳ ಗ್ರಾಮ ಪಂಚಾಯತಿಗಳ ಸದಸ್ಯರು ಭಾಗವಹಿಸಿದ್ದರು.
ಕಾರ್ಗಿಲ್ ವಿಜಯ ದಿವಸ ಪ್ರಯುಕ್ತ ತರಬೇತಿ ಕೆಂದ್ರದಲ್ಲಿ ಸೈನಿಕರ ಶೌರ್ಯ, ಪರಾಕ್ರಮದ ದಿನ ಆಚರಿಸಿ ಗೌರವ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಚಿಕ್ಕನರಗುಂದ ಗ್ರಾಮ ಪಂಚಾಯತ ಅಧ್ಯಕ್ಷ ಮುತ್ತು ರಾಯರೆಡ್ಡಿ, ಉಪಾಧ್ಯಕ್ಷೆ ಮಲ್ಲಮ್ಮ ಮರಿಯನ್ನವರ, ವಾಸನ ಗ್ರಾಮ ಪಂಚಾಯತ ಅಧ್ಯಕ್ಷೆ ಕೆ.ಟಿ. ನೀಲರೆಡ್ಡಿ, ಉಪಾಧ್ಯಕ್ಷೆ ಆರ್.ಟಿ. ತಳವಾರ, ಶಿರೋಳ ಗ್ರಾಮ ಪಂಚಾಯತ ಅಧ್ಯಕ್ಷ ಎಸ್ ಎಸ್ ಗೂಡ್ಲೂರು ಹಾಗೂ ಮೂರು ಗ್ರಾಪಂಗಳ ಸದಸ್ಯರು ಈ ತರಬೇತಿಯಲ್ಲಿ ಭಾಗವಹಿಸಿದ್ದರು.
ಐದು ದಿನಗಳ ತರಬೇತಿ ಸಂಯೋಜಕರಾಗಿ ಎಸ್ ಐಆರ್ ಡಿ ಸಂಸ್ಥೆಯ ಮಂಜುನಾಥ ಮುಧೋಳ, ಗಂಗಮ್ಮ ನಾಯಕ ಕಾರ್ಯನಿರ್ವಹಿಸಿದರು. ವಿಷಯ ನಿರ್ವಾಹಕರಾದ ಉಪಾಸಿ ಹಾಗೂ ತಾಪಂ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.