ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ದೇವರೇನು?
ಅವರಪ್ಪನ್ನನ್ನು ಕಳ್ಳತನ ಮಾಡುವ ಎಂಬ ಮಾತಿದೆ. ಅದರಂತೆ ಈಗ ಗ್ರಾಮದೇವತೆಯ ಮೈಮೇಲೆ ಇರುವ ಲಕ್ಷಾಂತರ ರೂ ಮೌಲ್ಯದ ಆಭರಣಗಳನ್ನು ದುಷ್ಕರ್ಮಿಗಳು ಮ ಕಳ್ಳತನ ಮಾಡಿದ್ದಾರೆ.
Advertisement
ತಾಲೂಕಿನ ಹೆಸರೂರಿನಲ್ಲಿರುವ ದ್ಯಾಮವ್ವ ದೇವಿಯ ಮೂರ್ತಿಯ 1 ಲಕ್ಷ 14 ಸಾವಿರದ 500 ರೂ. ಮೌಲ್ಯದ ಬಂಗಾರ ಮತ್ತು ಬೆಳ್ಳಿ ಆಭರಣಗಳನ್ನು ಕದಿಯಲಾಗಿದೆ.
ಬಂಗಾರದ ಗುಂಡಗಡಗಿ, ಬೋರಮಳ, ನೆಕ್‌ಲೇಸ್, ಬೆಳ್ಳಿಯ ಕಾಲುಚೈನು, ಕಿರೀಟ, ಕಾಲ್ಗೆಜ್ಜೆ ಇನ್ನೂ ಮುಂತಾದ ದೇವಿಯ ಆಭರಣಗಳನ್ನು ಕಳುವಾಗಿವೆ.
ಗ್ರಾಮದ ಗುಂಡಪ್ಪ ಜಂತ್ಲಿಯವರು ನೀಡಿದ ದೂರಿನ ಆಧಾರದಲ್ಲಿ ಮುಂಡರಗಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.