ವಿಜಯಸಾಕ್ಷಿ ಸುದ್ದಿ, ತುಮಕೂರು
ವಿಧಾನಸಭಾ ಚುನಾವಣೆಯಲ್ಲಿ ಅಷ್ಟೋ ಇಷ್ಟೋ ಖರ್ಚು ಮಾಡಿ ಎಂಎಲ್ಎ ಆಗ್ತಿದ್ವಿ. ಗ್ರಾ.ಪಂ. ಚುನಾವಣೆ ನಡೆದಿದ್ದು ನೋಡಿದ್ರೆ ಭಯ ಆಗುತ್ತೆ. ನಾನಾಗಲಿ ಕೃಷ್ಣಪ್ಪಣ್ಣ ಆಗಲಿ ಚುನಾವಣೆಗೆ ದುಡ್ಡು ಎಲ್ಲಿಂದ ತರೋದು. ಕೃಷ್ಣಪ್ಪರೇ ನೀವು ಒಂದು ಆಸ್ತಿ ರೆಡಿ ಮಾಡಿ, ನಾನು ನಮ್ಮಪ್ಪನ ಒಂದು ಆಸ್ತಿ ಮಾರುತ್ತೇನೆ ಎಂದು ತುಮಕೂರು ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ ಆತಂಕ ವ್ಯಕ್ತಪಡಿಸಿದರು.
ತುರುವೇಕೆರೆ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಒಬ್ಬೊಬ್ಬರು ಖರ್ಚು ಮಾಡಿರೋ ರೇಟ್ ಲೆಕ್ಕ ಹಾಕಿದ್ರೆ, ಒಂದು ಸೀಟ್ ಗೆ ಒಂದು ಕೋಟಿ ಎಲ್ಲಣ್ಣ ತರೋದು. ಮೂರು ತಾಲ್ಲೂಕು ಚುನಾವಣೆಗೆ ಖರ್ಚು ಮಾಡುವ ಹಣನಾ ಒಂದು ಪಂಚಾಯಿತಿಗೆ ಖರ್ಚು ಮಾಡಿದ್ದಾರೆ. ಹೀಗೆ ಮಾಡಿದ್ರೆ ಯಾವ ಮನೆ ಹಾಳು ಮಾಡಿಕೊಳ್ಳಬೇಕು, ಕೆಲಸ ಹೇಗೆ ಮಾಡೋದು ಎಂದು ಪ್ರಶ್ನಿಸಿದರು.
ನನ್ನ ಸೋಲಿಸೋಕೆ ಸಾಲುಗಟ್ಟಿ ನಿಂತಿದ್ದಾರೆ. ನಮ್ಮನ್ನ ತೆಗೆಯೋರು ಯಾರು.?. ನೀವು ತೆಗೆಯಬೇಕು ಇಲ್ಲಾ, ದೇವರು ತೆಗೆಯಬೇಕು.
ಬಿಜೆಪಿ ನನ್ನ ಮೇಲೆ ಬಿಟ್ಟು ತೆಗೆಯುವುದಕ್ಕೆ ಆಗುವುದಿಲ್ಲ.
ನಮ್ಮ ತಾಲ್ಲೂಕು 25 ವರ್ಷಗಳಿಂದ ಜೆಡಿಎಸ್ ಭದ್ರಕೋಟೆ ಎಂದು ಶಾಸಕರು ವಿಶ್ವಾಸ ವ್ಯಕ್ತಪಡಿಸಿದರು.
ನಾನು ಪಳಗಿರುವುದು ದೇವೇಗೌಡ್ರ ಗರಡಿಯಲ್ಲಿ. ತಾತ ಶ್ರೀಕೃಷ್ಣ ಪರಮಾತ್ಮ ಇದ್ದ ಹಾಗೆ ಚುನಾವಣೆ ಹೇಗೆ ಮಾಡಬೇಕು ಅಂತಾ ಹೇಳಿಕೊಟ್ಟಿದ್ದಾರೆ ಎಂದು ಶಾಸಕ ಗೌರಿಶಂಕರ ಅಭಿಪ್ರಾಯ ಪಟ್ಟರು.