ವಿಜಯಸಾಕ್ಷಿ ಸುದ್ದಿ, ಗದಗ
Advertisement
ತಾಲೂಕಿನ ಮಲ್ಲಸಮುದ್ರ ಗ್ರಾಮದಲ್ಲಿ ಮಂಗಳವಾರ ಸಂಜೆ ಮೊಹರಂ ಮೆರವಣಿಗೆ ವೇಳೆ ನಡೆದ ಚಾಕು ಇರಿತದ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ಆರು ಜನರ ವಿರುದ್ಧ ಕೊಲೆ ಯತ್ನ ಸೇರಿದಂತೆ ಹಲವು ಕಲಂ ಅಡಿ ಕೇಸ್ ದಾಖಲಾಗಿದ್ದು, ಅದರಲ್ಲಿ ಈಗಾಗಲೇ ಮೂರು ಜನರನ್ನು ಬಂಧಿಸಲಾಗಿದೆ.
ಸೋಮು ಗುಡಿ, ಸಲೀಂಸಾಬ್ ಅಲಿಯಾಸ್ ಸಲ್ಮಾನ್ ಇಮಾಮ್ ಸಾಬ್ ಬಡೆಖಾನ್, ಯಲ್ಲಪ್ಪ ಮಲ್ಲಾಪೂರ, ರಾಮಕೃಷ್ಣ ಎಚ್ ಹಂಡಿ, ಶಿವು ಗದಗಿನ, ದಯಾನಂದ ಗುಡಿ ಎಂಬುವವರ ಮೇಲೆ ಕೊಲೆ ಯತ್ನ ಸೇರಿದಂತೆ ಹಲವು ಕಲಂ ಅಡಿ ಪ್ರಕರಣ ದಾಖಲಾಗಿದೆ.