ವಿಜಯಸಾಕ್ಷಿ ಸುದ್ದಿ, ಗದಗ: ಬೆಂಗಳೂರಿನ ಚಿತ್ರಕಲಾ ಪರಿಷತ್ತು ಆಯೋಜಿಸುವ ರಾಜ್ಯದ ಪ್ರತಿಷ್ಠಿತ ಚಿತ್ರಕಲಾ ಸಂತೆಯನ್ನು ಇತ್ತೀಚೆಗೆ ಬೆಂಗಳೂರಿನ ಕುಮಾರ ಕೃಪಾ ರಸ್ತೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು. ಈ ಸಂತೆಯಲ್ಲಿ ರಾಜ್ಯ-ಹೊರ ರಾಜ್ಯದ, ರಾಷ್ಟçಮಟ್ಟದ ಕಲಾವಿದರು ತಮ್ಮ ಕಲಾಕೃತಿಗಳೊಂದಿಗೆ ಭಾಗವಹಿಸಿ ಕಲಾಕೃತಿಗಳ ಅದ್ದೂರಿ ಮಾರಾಟ ಮಡುವರು. ಲಕ್ಷಕ್ಕಿಂತಲೂ ಅಧಿಕ ಜನ ಈ ಸಂತೆಯಲ್ಲಿ ಪಾಲ್ಗೋಳ್ಳುವರು. ಕಲೆಗೆ ಮತ್ತು ಕಲಾವಿದರಿಗೆ ಮಾರುಕಟ್ಟೆ ರೂಪಿಸುವಲ್ಲಿ ಈ ಚಿತ್ರಸಂತೆ ಸಹಕಾರಿಯಾಗಿದೆ. ಇಂತಹ ಕಲಾ ಜಾತ್ರೆಯಲ್ಲಿ ವಿಜಯ ಲಲಿತಕಲಾ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿ ಹಲವಾರು ಕಲಾಕೃತಿಗಳನ್ನು ಮಾರಾಟ ಮಾಡಿ ಯಶಸ್ವಿಯಾಗಿದ್ದಾರೆ. ಈ ಸಂತೆಯಲ್ಲಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಸಂಸ್ಥೆಯ ಅಧ್ಯಕ್ಷರಾದ ಪ್ರೊ ಅಶೋಕ ಅಕ್ಕಿ, ಕಾರ್ಯದರ್ಶಿ ಪ್ರೊ. ಸಂತೋಷ ಅಕ್ಕಿ ಹಾಗೂ ಪ್ರಾಚಾರ್ಯರು, ಸಿಬ್ಬಂದಿವರ್ಗ ಅಭಿನಂದಿದ್ದಾರೆ.
ಚಿತ್ರಸಂತೆಯಲ್ಲಿ ವಿದ್ಯಾರ್ಥಿಗಳ ಸಾಧನೆ
Advertisement