ವಿಜಯಸಾಕ್ಷಿ ಸುದ್ದಿ, ಚಿಕ್ಕಮಗಳೂರು
ನ್ಯಾಯಾಲಯದ ಕುರಿತು ನನಗೆ ಅಪಾರ ಗೌರವವಿದೆ. ನಾನು ನ್ಯಾಯಾಲಯದ ಬಗ್ಗೆ ಅಗೌರವದ ಮಾತುಗಳನ್ನು ಹೇಳಿಲ್ಲ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನ್ಯಾಯಾಲಯದ ಬಗ್ಗೆ ನಮಗೆ ಗೌರವ ಯಾವಾಗಲೂ ಇರುತ್ತದೆ. ನ್ಯಾಯಧೀಶರು ಸರ್ವಜ್ಞರಲ್ಲ ಎಂದು ಹೇಳಿದ್ದೇನೆ. ಅವರು ಕೂಡ ತಾಂತ್ರಿಕ ಸಮಿತಿಯ ವರದಿ ಆಧರಿಸಿ ನಿರ್ದೇಶನ ನೀಡುತ್ತಾರೆ. ಸುಪ್ರೀಂಕೋರ್ಟ್ ಹೇಳಿಯೇ ಟೆಕ್ನಿಕಲ್ ಕಮಿಟಿ ನೇಮಿಸಿದೆ ಎಂದಿದ್ದೇನೆ. ನನ್ನ ಹೇಳಿಕೆಯಲ್ಲಿ ಅಗೌರವ, ಅಪನಂಬಿಕೆಯ ಹುಟ್ಟಿಸುವ ಹೇಳಿಕೆ ಏನಿಲ್ಲ ಎಂದು ಹೇಳಿದ್ದಾರೆ.
ಸರ್ವಜ್ಞ ಅಲ್ಲದ ಅಪನಂಬಿಕೆಯ ಪದವೇ, ನಿಂದನೆಯ? ಟೀಕೆಯೇ? ಏನೂ ಅಲ್ಲ. ನಾನು ಭಾವಿಸಿದಂತೆ ಜಗತ್ತಿನ 780 ಕೋಟಿ ಜನರಲ್ಲಿಯೂ ಎಲ್ಲ ಬಲ್ಲ ಸರ್ವಜ್ಞರಿಲ್ಲ. ನನ್ನ ಒಂದೊಂದು ಶಬ್ಧಕ್ಕೂ ನಾನು ಕಮಿಟಿಡ್ ಇದ್ದೇನೆ. ಯಾರೂ ತಪ್ಪು ಗ್ರಹಿಸಬಾರದು ಎಂದು ಹೇಳಿದ್ದಾರೆ.