ಜಿಮ್ಸ್ ನಲ್ಲಿ ಬಿಜೆಪಿ ಮುಖಂಡನ ಸಂಶಯಾಸ್ಪದ ಸಾವು!

0
Spread the love

ವಿಜಯಸಾಕ್ಷಿ ಸುದ್ದಿ, ಗದಗ

Advertisement

ಬಿಜೆಪಿ ಶಹರ ಮಂಡಲದ ಉಪಾಧ್ಯಕ್ಷ ರಾಜಶೇಖರ್ ಅಲಿಯಾಸ್ ಮಂಜುನಾಥ್ ಪಾಟೀಲ್ ಜಿಮ್ಸ್ ನ ಸಾರಿ ವಾರ್ಡ್ ನಲ್ಲಿ ಇರುವ ಶೌಚಾಲಯದಲ್ಲಿ ಸಂಶಯಾಸ್ಪದ ರೀತಿಯಲ್ಲಿ ಅಸುನೀಗಿದ್ದಾರೆ.

ವಾರದ ಹಿಂದೆ ಜಿಮ್ಸ್ ನಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದ ರಾಜಶೇಖರ, ಸೋಮವಾರ ಮುಂಜಾನೆ ಪತ್ನಿಯನ್ನು ಉಪಾಹಾರಕ್ಕೆ ಕಳುಹಿಸಿ ಶೌಚಾಲಯಕ್ಕೆ ತೆರಳಿದ್ದರು. ಮರಳಿ ಬಂದ ಪತ್ನಿ ಹುಡುಕಾಡಿದಾಗ ಶೌಚಾಲಯದಲ್ಲಿ ಶವವಾಗಿ ಬಿದ್ದಿದ್ದನ್ನು ಕಂಡು ಆಘಾತಗೊಂಡಿದ್ದಾರೆ.

ಕೆಲವು ಮೂಲಗಳ ಪ್ರಕಾರ ರಾಜಶೇಖರ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ, ಪೊಲೀಸರ ಪ್ರಕಾರ, ರಾಜಶೇಖರ ಆತ್ಮಹತ್ಯೆ ಮಾಡಿಕೊಂಡಿಲ್ಲ, ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ, ಕೊರಳಲ್ಲಿ ಟವಲ್ ಇತ್ತು. ಹೀಗಾಗಿ ಎಲ್ಲರಲ್ಲೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವದಂತಿ ಹಬ್ಬಿದೆ ಎಂದು ಗ್ರಾಮೀಣ ಠಾಣೆಯ ಪಿಎಸ್ಐ ಅಜೀತಕುಮಾರ್ ಹೊಸಮನಿ ಮಾಹಿತಿ ನೀಡಿದ್ದಾರೆ.

ಕಾಲು‌ ಜಾರಿ ಬಿದ್ದರೆ ಪ್ರಾಣ ಹೋಗುತ್ತಾ? ಎಂಬ ಪ್ರಶ್ನೆ ಸಾರ್ವಜನಿಕರ ನಡುವೆ ಹಾಗೂ ಬಿಜೆಪಿ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದರೆ, ಪೊಲೀಸರು ಇಡೀ ಪ್ರಕರಣಕ್ಕೆ ಎಳ್ಳು-ನೀರು ಬಿಟ್ಟಿದ್ದಾರೆ.


Spread the love

LEAVE A REPLY

Please enter your comment!
Please enter your name here