ವಿಜಯಸಾಕ್ಷಿ ಸುದ್ದಿ, ಗದಗ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಗದಗ ವತಿಯಿಂದ ನ.23ರಂದು ಸಂಜೆ ೬ ಗಂಟೆಗೆ ಇಲ್ಲಿನ ಸಾಹಿತ್ಯ ಪರಿಷತ್ ಕಾರ್ಯಾಲಯದ ತೋಂಟದ ಸಿದ್ಧಲಿಂಗಶ್ರೀಗಳ ಕನ್ನಡ ಭವನದಲ್ಲಿ ಶ್ರೀಮತಿ ಶೇಕುಬಾಯಿ ಎಲ್.ದೇಸಾಯಿ ಸ್ಮರಣಾರ್ಥ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆಯೋಜಿಸಲಾಗಿದೆ.
ಹೆಸರಾಂತ ವೈದ್ಯರಾದ ಡಾ. ಕೆ.ಡಿ. ಗೋಡಖಿಂಡಿ ಇವರು ಬಾಳೆಹಣ್ಣು ವ್ಯಾಪಾರಿಗಳಾದ ಮಮತಾಜಬಿ ಬಾಬುಸಾಬ ಕುಸುಗಲ್‌ಗಿಗೆ ಪ್ರಶಸ್ತಿ ಪ್ರದಾನವನ್ನು ಮಾಡುವರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ವಹಿಸುವರು.
ಇದೇ ಸಂದರ್ಭದಲ್ಲಿ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಪ್ರೊ. ಚಂದ್ರಶೇಖರ ವಸ್ತçದ, ಶ್ರೇಷ್ಠ ಅಧ್ಯಾಪಕ ಪ್ರಶಸ್ತಿ ಪುರಸ್ಕೃತರಾದ ಡಾ. ಉಮೇಶ ಪುರದ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಸುರೇಶ ಟಾಕರೆಪ್ಪ ಲಮಾಣಿ ಕಳಸಾಪೂರ, ಕರ್ಕಾಟಕ ಕಾರ್ಯನಿರತ ದಿನಪತ್ರಿಕೆ ಸಂಪಾದಕರ ಸಂಘದ ಅಧ್ಯಕ್ಷರಾದ ಜಗದೀಶ ಪೂಜಾರ, ರೋಣದ ನಿವೃತ್ತ ಅಧ್ಯಾಪಕ ಪಿ.ಎಚ್. ಕಡಿವಾಲ, ರಾಜ್ಯ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ರತ್ನಾ ಬದಿ ಶಿರಹಟ್ಟಿ, ‘ಕನಕ ಗೌರವ ಪ್ರಶಸ್ತಿ’ ಪುರಸ್ಕೃತರಾದ ಡಾ. ಎಂ.ಎನ್. ಅಂಬಲಿಯವರ ಗದಗ, ಗದುಗಿನ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಕೆ.ಎ. ಬಳಿಗೇರ, ಸಮಾಜ ಸೇವಕರಾದ ಬಾಲಚಂದ್ರ ಭರಮಗೌಡರ ಗದಗ, ರೈತಸ್ನೇಹಿ ನಿವೃತ್ತ ಅಧಿಕಾರಿಗಳಾದ ಸುರೇಶ ಕುಂಬಾರ ಗದಗ ಇವರಿಗೆ ಸನ್ಮಾನ ಜರುಗಲಿದೆ.
ಪ್ರಸಾದ ಸುತಾರ ಹಾಗೂ ಗುರುನಾಥ ಸುತಾರ ಇವರಿಂದ ಸಂಗೀತ ಕಾರ್ಯಕ್ರಮ ಜರುಗಲಿದೆ. ಕಾರ್ಯಕ್ರಮದಲ್ಲಿ ಸಾಹಿತಿಗಳು, ಕನ್ನಡಾಭಿಮಾನಿಗಳು, ಪರಿಷತ್ತಿನ ಸದಸ್ಯರು ಭಾಗವಹಿಸಬೇಕೆಂದು ಕಾರ್ಯದರ್ಶಿ ಶಿವಾನಂದ ಗಿಡ್ನಂದಿ, ಕಿಶೋರಬಾಬು ನಾಗರಕಟ್ಟಿ, ಡಿ.ಎಸ್. ಬಾಪುರಿ, ದತ್ತಪ್ರಸನ್ನ ಪಾಟೀಲ, ಶ್ರೀಕಾಂತ ಬಡ್ಡೂರ ಪ್ರಕಟನೆಯಲ್ಲಿ ಕೋರಿದ್ದಾರೆ.