ಜೆಡಿಎಸ್ ಮುಖಂಡ ಅಕ್ತರ್‌ಗೆ ಆವಾಜ್ ಹಾಕಿದ ಮನಿಯಾರ್!

0
Spread the love

Advertisement

-ಅನ್ಸಾರಿಯವರನ್ನ ಮಂತ್ರಿ ಮಾಡಿದ್ದು ಅಲ್ಪಸಂಖ್ಯಾತರ ಮತಗಳಿಗಾಗಿ

-ದೇವೇಗೌಡರ ರಾಜಕೀಯ ತಂತ್ರಗಾರಿಕೆ

-ಅಕ್ತರ್‌ಸಾಬ್ ಯಾವ ಸೀಮೆ ದೊಣ್ಣೆನಾಯಕ

-ಕ್ಷೇತ್ರದ 63 ಸಾವಿರ ಜನ ಅನ್ಸಾರಿಯವರ ಜೊತೆಗಿದ್ದಾರೆ

ವಿಜಯಸಾಕ್ಷಿ ಸುದ್ದಿ, ಗಂಗಾವತಿ:

ಮಾಜಿ ಸಚಿವ ಇಕ್ಬಾಲ್ ಅನ್ಸಾರಿಯವರ ಬಗ್ಗೆ ಹಗುರವಾಗಿ ಮಾತನಾಡಿರುವ ಜೆಡಿಎಸ್‌‌ನ ಪಿ.ಅಕ್ತರ್ ಸಾಬ್ ಯಾವ ಸೀಮೆ ದೊಣ್ಣೆ ನಾಯಕ. ನಾಲಿಗೆ ಹಿಡಿತದಲ್ಲಿಟ್ಟುಕೊಂಡು ಮಾತನಾಡಿದರೆ ಒಳ್ಳೇಯದು. ನಾವೇನಾದರೂ ಎರಡನೇ ನಾಲಿಗೆ ತೆರೆದರೆ ಪರಿಣಾಮ ಎದುರಿಸಬೇಕಾಗುತ್ತೆ ಎಂದು ಗಂಗಾವತಿ ನಗರಸಭೆ ಸದಸ್ಯ ಶ್ಯಾಮೀದ್ ಮನಿಯಾರ್ ಆವಾಜ್ ಹಾಕಿದರು.

ಸೋಮವಾರ ಅನ್ಸಾರಿಯವರ ನಿವಾಸದಲ್ಲಿ ಸುದ್ದಿಗೋಷ್ಢಿಯಲ್ಲಿ ಮಾತನಾಡಿದ ಅವರು,
ಸಿದ್ದರಾಮಯ್ಯನವರನ್ನು ನಮ್ಮ ನಾಯಕರಾಗಿ ಒಪ್ಪಲ್ಲ ಎಂಬ ಮುಸ್ಲಿಂ ಮುಖಂಡ ಅಕ್ತರ್‌ಸಾಬ್ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯೆ ನೀಡಿದರು.

ಅನ್ಸಾರಿ ಹಿಂದೆ 63 ಸಾವಿರ ಜನ ಕಾರ್ಯಕರ್ತರಿದ್ದೇವೆ…
ನಾಲಿಗೆ ಬಿಗಿ ಹಿಡಿದುಕೊಂಡು ಮಾತನಾಡು ಎಂದು ಎಚ್ಚರಿಕೆ‌ ನೀಡಿದ ಅವರು,
ಮಸೀದಿಗಳು ಪ್ರಾರ್ಥನೆ ಮಾಡೋಕೆ ಇವೆ, ಆಣೆ ಮಾಡೋಕೆ ಅಲ್ಲ…
ರಾತ್ರಿ ಕುಡಿದು ಬರೋರಿಗೆ ಮಸೀದಿ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನೀನ ಆಣೆ ಮಾಡೋಕೆ ಯಾವದರ ದರ್ಗಾಗೆ ಹೋಗು,ಮಠಕ್ಕೆ ಹೋಗು, ಆದ್ರೆ ಮಸೀದಿಗೆ ಬರಬೇಡ..
ದೇವೇಗೌಡ, ಕುಮಾರಸ್ವಾಮಿಯವರು ಅನ್ಸಾರಿಯನ್ನ ಮಂತ್ರಿ ಮಾಡಿಲ್ಲ..
ಅಲ್ಪ ಸಂಖ್ಯಾತರ ನಾಯಕ ಯಾರೂ ಇಲ್ಲ, ಮುಸ್ಲಿಂರ ಮತಕ್ಕಾಗಿ ಮಂತ್ರಿ ಮಾಡಿದ್ದಾರೆ. ಕೊಪ್ಪಳದಲ್ಲಿ ಜೆ.ಡಿ.ಎಸ್.ದ್ವಜ ಹಿಡಿಯೋರು ಯಾರೂ ಇರಲಿಲ್ಲ..
ಅನ್ಸಾರಿ ಬಂದ ಮೇಲೆ ಜೆ.ಡಿ.ಎಸ್ ಗೆ ಈ ಭಾಗದಲ್ಲಿ ಶಕ್ತಿ ಬಂದಿದೆ ಎಂದು ಶ್ಯಾಮಿದ್ ಕುಟುಕಿದರು.

ಅಲ್ಪಸಂಖ್ಯಾತರ ನಾಯಕ ಅನ್ಸಾರಿ ಸಾಹೇಬ್ರು. ಅನ್ಸಾರಿಯವರಿಗೆ ಸಿದ್ದರಾಮಯ್ಯನವರು ನಾಯಕ. ಸಿದ್ದರಾಮಯ್ಯನವರ ನಾಯಕತ್ವದಲ್ಲೇ ಅನ್ಸಾರಿ ಸಾಹೇಬ್ರು ಚುನಾವಣೆ ಎದುರಿಸಿ ಗೆದ್ದೇ ಗೆಲ್ಲುತ್ತಾರೆ. ಅನ್ಸಾರಿಯವರನ್ನು ಟೀಕಿಸುವವರು ತಾಕತ್ತಿದ್ದರೆ ಎಲೆಕ್ಷನ್‌ನಲ್ಲಿ ಗೆದ್ದು ತೋರಿಸಲಿ ಎಂದು ಸವಾಲು ಹಾಕಿದರು.

ಕುಮಾರಸ್ವಾಮಿ ಹಾಗೂ ಟಿ.ಎ.ಶರವಣ್ ಹೇಳಿಕೆ ಸತ್ಯಕ್ಕೆ ದೂರವಾದ ಸಂಗತಿಯಾಗಿದ್ದು ಸಿದ್ದರಾಮಯ್ಯನವರು ಈಗಲೂ ಅಲ್ಪಸಂಖ್ಯಾತರ ಧ್ವನಿಯಾಗಿ ಘರ್ಜಿಸುತ್ತಿದ್ದಾರೆ. ಸಿದ್ದರಾಮಯ್ಯನವರೇ ಅಲ್ಪಸಂಖ್ಯಾತರ ನಾಯಕ ಎಂದು ಪುನರುಚ್ಛರಿಸಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಮಲ್ಲೇಶ್ ದೇವರಮನಿ, ಮಹಮ್ಮದ್ ಹನೀಫ್, ಮೌಲಾಸಾಬ್, ಮೆಹಬೂಬ್ ಸಾಬ್ ಮತ್ತಿತರರು ಇದ್ದರು.


Spread the love

LEAVE A REPLY

Please enter your comment!
Please enter your name here