ವಿಜಯಸಾಕ್ಷಿ ಸುದ್ದಿ, ಚಿಕ್ಕಬಳ್ಳಾಪುರ
ಇಲ್ಲಿಯ ಜಿಲ್ಲಾ ಕಾರಾಗೃಹದಲ್ಲಿ 55ಕ್ಕೂ ಹೆಚ್ಚು ಕೈದಿಗಳಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಆತಂಕ ಸೃಷ್ಟಿಸಿದೆ. ಇಬ್ಬರು ಪೊಲೀಸರು ಕೊರೊನಾದಿಂದ ಸಾವನ್ನಪ್ಪಿದ್ದಾರೆ.
ಒಂದು ವಾರದ ಹಿಂದೆ 7 ಜನ ಕೈದಿಗಳಲ್ಲಿ ಲಕ್ಷಣಗಳು ಕಂಡು ಬಂದಿದ್ದವು. ಅವರನ್ನು ಪರೀಕ್ಷೆಗೆ ಒಳಪಡಿಸಾದಗ ಎಲ್ಲರಲ್ಲಿಯೂ ಸೋಂಕು ಇರುವುದು ಖಚಿತವಾಗಿತ್ತು. ಇದರಿಂದಾಗಿ ಕಾರಾಗೃಹದಲ್ಲಿನ ಎಲ್ಲರಿಗೂ ಟೆಸ್ಟ್ ಮಾಡಿಸಿದಾಗ 55 ಕ್ಕೂ ಹೆಚ್ಚು ಜನರಲ್ಲಿ ಸೋಂಕು ಕಾಣಿಸಿಕೊಂಡಿರುವುದು ಗೊತ್ತಾಗಿದೆ.
ಸೋಂಕಿತರನ್ನು ಹೊರ ವಲಯದ ಕಂದವಾರ ಗ್ರಾಮದ ಎಎನ್ ಎಂ ತರಬೇತಿ ಕೇಂದ್ರದ ಸಿಸಿ ಸೆಂಟರ್ ನಲ್ಲಿರಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇಲ್ಲಿ ಕೈದಿಗಳಿಗಷ್ಟೇ ಚಿಕಿತ್ಸೆ ನೀಡುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿದೆ.
ಈಗಾಗಲೇ ಜಿಲ್ಲೆಯ ಬಾಗೇಪಲ್ಲಿ ಪೊಲೀಸ್ ಠಾಣೆಯ ಮುಖ್ಯ ಪೇದೆ ಶ್ರೀನಿವಾಸ್ ಹಾಗೂ ಮಂಚೇನಹಳ್ಳಿ ಪೊಲೀಸ್ ಠಾಣೆಯ ಮುಖ್ಯ ಪೇದೆ ಲೋಕೇಶ್ ಮಹಾಮಾರಿಗೆ ಬಲಿಯಾಗಿದ್ದಾರೆ. ಜಿಲ್ಲೆಯಾದ್ಯಾಂತ 25ಕ್ಕೂ ಹೆಚ್ಚು ಪೊಲೀಸರು ಸೋಂಕಿಗೆ ಒಳಗಾಗಿದ್ದಾರೆ. ಬಹುತೇಕರು ಹೊಂ ಐಸೋಲೇಷನ್ ನಲ್ಲಿದ್ದು, ಇಬ್ಬರನ್ನೂ ಮಾತ್ರ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.