ವಿಜಯಸಾಕ್ಷಿ ಸುದ್ದಿ, ಬೆಳಗಾವಿ
ಡ್ರಗ್ಸ್ ಪ್ರಕರಣದಲ್ಲಿ ಒತ್ತಡಗಳು ಬರುತ್ತಿವೆ ಎಂಬುದು ಕೇವಲ ಊಹಾಪೋಹ. ಯಾರ ಒತ್ತಡಕ್ಕೂ ನಮ್ಮ ಪೊಲೀಸರು ಹಿಂಜರಿಯುವುದಿಲ್ಲ. ಯಾರೇ ಆಗಲಿ ಭಾಗವಹಿಸಿದ್ದರೆ ಶಿಕ್ಷೆ ಅನುಭವಿಸುತ್ತಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಸ್ಪಷ್ಟಪಡಿಸಿದ್ದಾರೆ.
ಬುಧವಾರ ಬೆಳಗಾವಿಯಲ್ಲಿ ಮಾಧ್ಯಗಳೊಂದಿಗೆ ಮಾತನಾಡಿದ ಅವರು, ನಟಿ, ನಿರೂಪಕಿ ಅನುಶ್ರೀ ಅವರಿಗೆ ರಾಜಕೀಯ ಬೆಂಬಲ ಇರುವ ಹಿನ್ನೆಲೆ ಡ್ರಗ್ಸ್ ಕೇಸ್‌ನಲ್ಲಿ ಸಾಫ್ಟ್ ಕಾರ್ನರ್ ತೋರಿಲಾಗುತ್ತಿದೆ ಎಂಬುದಕ್ಕೆ ಈ ರೀತಿ ಪ್ರತಿಕ್ರಿಯಿಸಿದರು.
ಪ್ರಕರಣದಲ್ಲಿ ಯಾರೂ ಒತ್ತಡ ಮಾಡುವುದಿಲ್ಲ. ಡ್ರಗ್ಸ ಕೇಸ್‌ನಲ್ಲಿ ಸರ್ಕಾರ ಬಹಳ ಕಠಿಣ ನಿರ್ಧಾರ ತೆಗೆದುಕೊಂಡಿದೆ. ಯಾರನ್ನೂ ಬಿಡುವ ಪ್ರಶ್ನೆಯೇ ಇಲ್ಲ. ನಿಜವಾದ ಅಪರಾಧಿಗಳಾದರೆ ಅವರು ಶಿಕ್ಷೆಗೆ ಒಳಗಾಗುತ್ತಾರೆ.
ಎಷ್ಟೇ ಪ್ರಭಾವಿಗಳಾದರೂ ಖಂಡಿತವಾಗಲೂ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ. ಇನ್ನು ಚಾರ್ಜ ಶೀಟ್‌ನಲ್ಲಿ ಕೈಡಲಾಗಿದೆ ಎಂಬ ಪ್ರಶ್ನೆಗೆ ಬಿಡುವ ಪ್ರಶ್ನೆಯೇ ಇಲ್ಲ, ಮಾಹಿತಿ ಪಡೆದು ತಿಳಿಸುತ್ತೇನೆ ಎಂದು ಹೇಳಿದರು.
ರಾಜ್ಯದಲ್ಲಿ 100 ಪೊಲೀಸ್ ಠಾಣೆಗಳನ್ನು ನಿರ್ಮಿಲಾಗುವುದು. ಹೊಸ ಜೈಲುಗಳ ಕಟ್ಟಡ ನಿರ್ಮಾಣ ಆಗುತ್ತಿವೆ. ಈಗಿರುವ ಜೈಲುಗಳಿಗೆ ಹೊಸ ಹೊಸ ಬ್ಯಾರಕ್‌ಗಳನ್ನು ಕಟ್ಟಿ ವಸತಿ ವ್ಯವಸ್ಥೆ ಹೆಚ್ಚಿಸಲಾಗುತ್ತಿದೆ. ಕೈದಿಗಳಿಗೆ ಎಲ್ಲ ಸೌಲಭ್ಯ ಕೊಡುತ್ತೇವೆ ಎಂದು ಗೃಹ ಸಚಿವರು ಭರವಸೆ ನೀಡಿದರು.
ಯಮಕನಮರಡಿ ಪೊಲೀಸ್ ಠಾಣೆ ಗೋಲ್ಡ್ ಸ್ಮಗ್ಲಿಂಗ್ ಕೇಸ್‌ಗೆ ಸಂಬಂಧಪಟ್ಟoತೆ ತನಿಖೆ ನಡೆಯುತ್ತಿದೆ. ಅಪರಾಧಿಗಳನ್ನು ಬಂಧಿಸಿದ್ದೇವೆ. ತನಿಖಾ ಹಂತದಲ್ಲಿ ಏನನ್ನೂ ಹೇಳಲು ಬರುವುದಿಲ್ಲ. ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ಸೂಚಿಸಿದ್ದೇನೆ.
ಎಷ್ಟೇ ದೊಡ್ಡ ಪೊಲೀಸ್ ಅಧಿಕಾರಿ ಭಾಗಿಯಾಗಿದ್ದರೂ ಬಿಡುವ ಪ್ರಶ್ನೆಯೇ ಇಲ್ಲ. ಯಾವುದೇ ಒತ್ತಡವನ್ನೂ ಪರಿಗಣಿಸದೇ ಅದನ್ನು ಹೊರ ತೆಗೆಯುತ್ತೇವೆ ಎಂದು ತಿಳಿಸಿದರು.
ಪೊಲೀಸ್ ಇಲಾಖೆಯಲ್ಲಿ ಸಾಕಷ್ಟು ಜನರು ಹತ್ತು ಹದಿನೈದು ವರ್ಷಗಳಿಂದ ಒಂದೇ ಠಾಣೆಯಲ್ಲಿ ಇದ್ದಾರೆ ಎಂಬ ವಿಚಾರಕ್ಕೆ ಪ್ರತಿಕ್ರಯಿಸಿದ ಗೃಹ ಸಚಿವರು, ಬದಲಾವಣೆಗಳನ್ನು ಮಾಡುತ್ತಿದ್ದೇವೆ.
ಅನೇಕ ಠಾಣೆಗಳಲ್ಲಿ ಐದು ವರ್ಷ ಮೇಲ್ಪಟ್ಟವರನ್ನು ಬದಲಾವಣೆ ಮಾಡಿದ್ದೇವೆ. ಕಾನ್ಸಟೇಬಲ್‌ಗಳ ಬದಲಾವಣೆ ಎಸ್‌ಪಿ ಮಟ್ಟದಲ್ಲಿ ಆಗುತ್ತದೆ. ಎಸ್‌ಐಗಳ ಬದಲಾವಣೆ ಡಿಐಜಿ ಮಟ್ಟದಲ್ಲಿ ಆಗುತ್ತವೆ. ಇಂತಿಷ್ಟು ಶೇಕಡಾವಾರು ಬದಲಾವಣೆ ಮಾಡಬೇಕು ಎಂದು ಹೇಳಿದ್ದೇವೆ. ಎಲ್ಲ ಖಾಲಿ ಮಾಡಿ ಬದಲಾವಣೆ ಮಾಡಲು ಆಗುವುದಿಲ್ಲ. ಇದರ ಜೊತೆಗೆ ತುಂಬಾ ಅನುಭವಸ್ಥ ಜಾಗದ ಪರಿಚಯಸ್ಥರು ಇರುವುದು ಬಹಳ ಅಗತ್ಯವಿದೆ ಎಂದು ಸ್ಪಷ್ಟಪಡಿಸಿದರು.
ಕೋವಿಡ್‌ನಿಂದ ಮೃತ ಪೊಲೀಸ್ ಕುಟುಂಬಗಳಿಗೆ ಎಲ್ಲ ರೀತಿಯ ಆರ್ಥಿಕ ನೆರವು ಕೊಡಲು ಈಗಾಗಲೇ ಯೋಜನೆ ಘೋಷಿಸಲಾಗಿದೆ. ಸುಮಾರು 30 ಲಕ್ಷ ರೂಪಾಯಿ ಸಿಗುತ್ತದೆ. ಕೆಎಸ್‌ಆರ್‌ಪಿಯಲ್ಲಿ ಬಹಳ ಜನರಿಗೆ ಸಿಕ್ಕಿದೆ. ಎಷ್ಟು ಬಾಕಿ ಇದೆ ಎಂಬ ಬಗ್ಗೆ ನನ್ನ ಬಳಿ ಅಂಕಿ ಸಂಖ್ಯೆ ಇಲ್ಲ ಎಂದು ತಿಳಿಸಿದರು.