ವಿಜಯಸಾಕ್ಷಿ ಸುದ್ದಿ, ಗದಗ
Advertisement
ರಸ್ತೆಯ ಪಕ್ಕದಲ್ಲಿ ಆಕಳು ಮೇಯಿಸುತ್ತಿದ್ದ ಮಲತಾಯಿ ಮೇಲೆ ಆಸ್ತಿ ಹಾಗೂ ಹಣ ಕೊಡುವಂತೆ ಜಗಳವಾಡಿ ಯುವಕನೋರ್ವ ಕೊಡಲಿಯಿಂದ ಹಲ್ಲೆ ಮಾಡಿದ ಘಟನೆ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ರುದ್ರಾಪುರ ಗ್ರಾಮದ ಬಳಿ ನಡೆದಿದೆ.
ರುದ್ರಾಪುರ ಗ್ರಾಮದ ಯುವಕ ಹನುಮಂತ ದ್ಯಾಮಣ್ಣ ಮುತಾರಿ ಎಂಬಾತ ಕಲ್ಲಿಗನೂರು ರಸ್ತೆಯ ಪಕ್ಕದಲ್ಲಿ ಆಕಳು ಮೇಯಿಸುತ್ತಿದ್ದ ಮಲತಾಯಿಯನ್ನು ಅವಾಚ್ಯ ಶಬ್ದಗಳಿಂದ ಬೈದಾಡಿ, ನನ್ನ ತಂದೆಯ ಆಸ್ತಿ ಹಾಗೂ ಹಣ ಕೊಡುವಂತೆ ಏಕಾಏಕಿ ಕೊಡಲಿಯಿಂದ ಹಲ್ಲೆ ಮಾಡಿದ್ದಾನೆ.
ಹಲ್ಲೆಯಿಂದ ತೀವ್ರ ಗಾಯಗೊಂಡ ಮಹಿಳೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದು, ಗಜೇಂದ್ರಗಡ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.