ವಿಜಯಸಾಕ್ಷಿ ಸುದ್ದಿ, ಯಾದಗಿರಿ
Advertisement
ಸುರಪೂರ ತಾಲೂಕು ವೈದ್ಯಾಧಿಕಾರಿ ಆರ್. ವಿ. ನಾಯಕ್ ನೇತೃತ್ವದ ತಂಡ ದಾಳಿ ನಡೆಸಿ ಇಬ್ಬರು ನಕಲಿ ವೈದ್ಯರನ್ನು ಬಂಧಿಸಿದ್ದಾರೆ. ಶಿವಾನಂದ ಹಿರೇಮಠ, ಸದ್ದಾಮ್ ಹುಸೇನ್ ಬಂಧಿತ ಆರೋಪಿಗಳು.
ಆರೋಪಿಗಳು ಯಾದಗಿರಿಯ ಸುರಪುರದ ದೇವತ್ಕಲ ಗ್ರಾಮದಲ್ಲಿ ರೋಗಿಗಳಿಗೆ ಆಲೋಪಥಿ ಚಿಕಿತ್ಸೆ ನೀಡುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ತಾಲೂಕು ವೈದ್ಯಾಧಿಕಾರಿಗಳು ಹಾಗೂ ತಂಡ ಇಬ್ಬರನ್ನೂ ಬಂಧಿಸಿ ಅಲೋಪಥಿ ಔಷಧ ಜಫ್ತಿ ಮಾಡಿಕೊಂಡಿದ್ದಾರೆ.
ಆರೋಪಿಗಳ ವಿರುದ್ಧ ಸುರಪೂರ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ಖಾಸಗೀಯ ವೈದಕೀಯ ನೋಂದಣಿ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.