ತೌಖ್ತೆ ಚಂಡಮಾರುತ – ಸಾವಿನ ಸಂಖ್ಯೆ 66ಕ್ಕೆ ಏರಿಕೆ!

0
Spread the love

ವಿಜಯಸಾಕ್ಷಿ ಸುದ್ದಿ, ಮುಂಬಯಿ

Advertisement

ಇತ್ತೀಚೆಗಷ್ಟೇ ತೌಖ್ತೆ ಚಂಡಮಾರುತ ಬೀಸಿದ್ದ ಸಂದರ್ಭದಲ್ಲಿ ಮುಳುಗಿದ್ದ ಬಾರ್ಜ್ ಪಿ 305 ಸಮುದ್ರದ ತಳದಲ್ಲಿ ಕಂಡು ಬಂದಿದೆ. ಎರಡು ಹಡಗುಗಳಿಂದ ಕಾಣೆಯಾದ 20 ಸಿಬ್ಬಂದಿಗಳ ಹುಡುಕಾಟ ಮುಂದುವರಿದಿದೆ ಎಂದು ನೌಕಾಪಡೆ ಹೇಳಿದೆ. ಬಾರ್ಜ್‌ನಿಂದ ಒಂಭತ್ತು ಜನ ಹಾಗೂ ಟಗ್ ಬೋಟ್ ದಿಂದ ನಾಪತ್ತೆಯಾಗಿರುವ 11 ಜನರ ಕುರುಹು ಇನ್ನೂ ಕಂಡು ಬಂದಿಲ್ಲ. ಆದರೆ, ಈ ಮೂಲಕ ಸಾವನ್ನಪ್ಪಿದವರ ಸಂಖ್ಯೆ 66ಕ್ಕೆ ಏರಿಕೆ ಕಂಡಿದೆ ಎಂದು ನೌಕಾಪಡೆಯ ವಕ್ತಾರರು ತಿಳಿಸಿದ್ದಾರೆ.

ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು (ಎಸ್‌ಎಆರ್) ಹೆಚ್ಚಿಸಲು ನೌಕಾಪಡೆಯು ವಿಶೇಷ ಡೈವಿಂಗ್ ತಂಡಗಳನ್ನು ನಿಯೋಜಿಸಿತ್ತು. ಇಲ್ಲಿಯವರೆಗೆ 66 ಮೃತದೇಹಗಳನ್ನು ಹೊರತೆಗೆಯಲಾಗಿದೆ.
ಬಾರ್ಜ್ ಪಿ 305 ರಲ್ಲಿದ್ದ 261 ಸಿಬ್ಬಂದಿಯಲ್ಲಿ 186 ಜನರನ್ನು ಈವರೆಗೆ ರಕ್ಷಿಸಲಾಗಿದೆ. 66 ಜನ ಸಾವನ್ನಪ್ಪಿದ್ದಾರೆ ಹಾಗೂ ಒಂಭತ್ತು ಜನ ನಾಪತ್ತೆಯಾಗಿದ್ದಾರೆ ಎಂದು ಸೇನಾಪಡೆ ತಿಳಿಸಿದೆ.

ಈಗಾಗಲೇ ಔಪಚಾರಿಕ ಕಾರ್ಯಗಳನ್ನು ಪೂರ್ಣಗೊಳಿಸಿದ ನಂತರ 41 ಶವಗಳನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ ಎಂದು ಸೇನೆ ಹೇಳಿದೆ.

ಬಾರ್ಜ್ ಪಿ 305, ಸೋಮವಾರ ಸಂಜೆ ಮುಂಬಯಿಯ ಕರಾವಳಿಯಲ್ಲಿ ಚಂಡಮಾರುತದ ಸಮಯದಲ್ಲಿ ಮುಳುಗಿತ್ತು. ಕೆಲವು ದೇಹಗಳು ಕೊಳೆತ ಸ್ಥಿತಿಯಲ್ಲಿವೆ. ಹಲವು ದೇಹಗಳಿಗೆ ಹೆಚ್ಚಿನ ಗಾಯಗಳಾಗಿವೆ. ಹೀಗಾಗಿ ಅವರುಗಳನ್ನು ಗುರುತಿಸಲು ಆಗಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಾವಿಗೀಡಾದವರಿಗೆ ಕೊವಿಡ್ ಸೋಂಕು ಇದೆಯೇ ಎಂದು ಕಂಡುಹಿಡಿಯಲು ಆರ್ ಟಿ-ಪಿಸಿಆರ್ ಪರೀಕ್ಷೆಗಳನ್ನು ಸಹ ನಡೆಸಲಾಯಿತು. ತೌಕ್ತೆ ಚಂಡಮಾರುತದ ಬಗ್ಗೆ ಎಚ್ಚರಿಕೆ ನೀಡಿದ್ದರೂ ಸಹ ಪ್ರಕ್ಷುಬ್ಧ ಪ್ರದೇಶದಲ್ಲಿ ಬಾರ್ಜ್ ಏಕೆ ಅಲ್ಲೇ ಉಳಿದಿದೆ ಎಂಬ ಬಗ್ಗೆ ತನಿಖೆ ನಡೆಸುವುದಾಗಿ ಪೊಲೀಸರು ಹೇಳಿರುವುದಾಗಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here