- ಹುಬ್ಬಳ್ಳಿಯಲ್ಲಿ ಗರಿಗೆದರಿದ ರಾಜಕೀಯ ಚಟುವಟಿಕೆ
ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ
ಸಿಎಂ ಯಡಿಯೂರಪ್ಪ ಪದತ್ಯಾಗ ಕುರಿತಂತೆ ಇಂದು ಸಂಜೆ ದೆಹಲಿ ವರಿಷ್ಠರಿಂದ ಬರುವ ಸಂದೇಶಕ್ಕಾಗಿ ರಾಜ್ಯದ ಜನತೆ ಕಾತರರಾಗಿದ್ದು, ಈ ಮಧ್ಯೆ ಸಿಎಂ ಸ್ಥಾನದ ರೇಸ್ ನಲ್ಲಿ ಮೊದಲ ಸಾಲಿನಲ್ಲಿರುವ ಕೇಂದ್ರ ಸಚಿವ ಪ್ರಹ್ಲಾದ ಜೋಷಿ ದಿಢೀರ್ ರಾಜಧಾನಿ ಬೆಂಗಳೂರಿಗೆ ಹಾರಿದ್ದಾರೆ.
ಇಂದು ಬಿಎಸ್ ವೈ ಪದತ್ಯಾಗ ನಿಟ್ಟಿನಲ್ಲಿ ಹೈಕಮಾಂಡ್ ಸಂದೇಶ ಬರಲಿದ್ದು, ಈ ಹಿನ್ನಲೆ
ಹುಬ್ಬಳ್ಳಿಯಲ್ಲಿ ರಾಜಕೀಯ ಚಟುವಟಿಕೆಗಳು ಗರಿ ಗೆದರಿವೆ. ನಿನ್ನೆ ರಾತ್ರಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಪ್ರಹ್ಲಾದ್ ಜೋಶಿ ಭೇಟಿಯಾಗಿ ಚರ್ಚೆ ನಡೆಸಿದ್ದರು. ಇದೇ ವೇಳೆ ಸಚಿವ ಜಗದೀಶ್ ಶೆಟ್ಟರ್ ಕೂಡ ಆರ್.ಎಸ್.ಎಸ್. ನಾಯಕರನ್ನು ಭೇಟಿಯಾಗಿ ಚರ್ಚಿಸಿದ್ದಾರೆ.
ಈ ಎಲ್ಲ ಬೆಳವಣಿಗೆಗಳ ನಡುವೆ ಇಂದು ಜೋಶಿ ಬೆಂಗಳೂರಿಗೆ ಹೋಗಿದ್ದು, ಆರ್.ಎಸ್.ಎಸ್ ಸಭೆಯಲ್ಲಿ ಪಾಲ್ಗೊಳ್ಳುವುದಕ್ಕಾಗಿ ಎನ್ನಲಾಗುತ್ತಿದ್ದರೂ ಸಂಜೆ ನಡೆಯುವ ಮಹತ್ವದ ಬೆಳವಣಿಗೆ ಹಿನ್ನೆಲೆಯಲ್ಲಿ ರಾಜಧಾನಿಗೆ ಬಂದಿದ್ದಾರೆ ಎಂಬ ಮಾತು ಕೇಳಿಬರುತ್ತಿವೆ.



