ವಿಜಯಸಾಕ್ಷಿ ಸುದ್ದಿ, ಬೆಂಗಳೂರು
ಕೊರೊನಾ ಸೋಂಕಿತರದಿಂದ ಲಕ್ಷ, ಲಕ್ಷ ಹಣ ವಸೂಲಿ ಮಾಡುತ್ತಿದ್ದ ಆಸ್ಪತ್ರೆಯ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಬಿಬಿಎಂಪಿ ಅಧಿಕಾರಿಗಳು ಕಂಪರ್ಟ್ ಮಲ್ಟಿ ಸ್ಪೆಷಾಲಿಟಿ ಹಾಸ್ಪಿಟಲ್ ಮೇಲೆ ದಾಳಿ ಮಾಡಿದ್ದಾರೆ. ಹಿರಿಯ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್, ಹಿರಿಯ ಐಎಎಸ್ ಅಧಿಕಾರಿ ಪಿ ಮಣಿವಣ್ಣನ್ ಸೇರಿದಂತೆ ಅಧಿಕಾರಿಗಳ ತಂಡ ದಾಳಿ ಮಾಡಿದೆ.
ಐಪಿಎಸ್ ಅಧಿಕಾರಿಗಳ ಮುಂದೆಯೇ ಆಸ್ಪತ್ರೆ ಸಿಬ್ಬಂದಿ ನೌಟಂಕಿ ಆಟವಾಡಲು ಪ್ರಾರಂಭಿಸಿದರು. ಇದಕ್ಕೆ ಅಲೋಕ್ ಕುಮಾರ್ ತಿರುಗೇಟು ನೀಡಿದ್ದಾರೆ. ಆಕ್ಸಿಜನ್ ಹೆಸರಿನಲ್ಲಿ ರೂ. 40 ರಿಂದ 50 ಸಾವಿರ ಚಾರ್ಜ್ ಮಾಡಲಾಗುತ್ತಿತ್ತು.
ಅಲ್ಲದೇ, ಧನದಾಹಿ ಆಸ್ಪತ್ರೆಯಲ್ಲಿ ಆಕ್ಸಿಜನ್ ನೀಡಲು ಪ್ರತಿ ನಿಮಿಷಕ್ಕೆ ರೂ. ಸಾವಿರಾರು ಬಿಲ್ ಮಾಡುತ್ತಿದ್ದರು. ಪ್ರತಿ ಗಂಟೆಗೆ ಆಕ್ಸಿಜನ್ ನೀಡಲು ರೂ. 1 ಸಾವಿರ ಪಡೆದುಕೊಳ್ಳುತ್ತಿದ್ದರು. ಇದರೊಂದಿಗೆ ಆಕ್ಸಿಜನ್, ಐಸಿಯು ಎಂಬ ಹೆಸರಲ್ಲಿ ಲಕ್ಷ ಲಕ್ಷ ವಸೂಲಿ ಮಾಡುತ್ತಿದ್ದರು.
ಆಸ್ಪತ್ರೆಯಿಂದ ವಿವರಣೆ ಪಡೆದ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಅವರು ಕಗ್ಗದಾಸಪುರ ಮುಖ್ಯ ರಸ್ತೆಯಲ್ಲಿರುವ ಕಂಫರ್ಟ್ ಆಸ್ಪತ್ರೆಯು ರೋಗಿಗಳಿಂದ ವಸೂಲಿ ಮಾಡಿದ್ದ ದುಡ್ಡನ್ನು ಅಲೋಕ್ ಕುಮಾರ್ ಮರು ವಸೂತಿ ಮಾಡುತ್ತಿದ್ದಾರೆ. 84 ಗಂಟೆ ಆಕ್ಸಿಜನ್ ನೀಡಿದ್ದಕ್ಕೆ ರೂ. 84 ಸಾವಿರ ರೂಪಾಯಿ ಬಿಲ್ ಪಡೆದಿದ್ದರು. ಸುಖಾ ಸುಮ್ಮನೆ ಕೊರೊನಾ ಸೋಂಕಿತರಿಗೆ ಎಚ್ಐವಿ ಟೆಸ್ಟ್ ಟೆಸ್ಟ್ ಮಾಡಿಸಿ ಬಿಲ್ ಚಾರ್ಜ್ ಮಾಡಿತ್ತು.



