ವಿಜಯಸಾಕ್ಷಿ ಸುದ್ದಿ, ಗದಗ:

ಗದಗ-ಬೆಟಗೇರಿ ನಗರಸಭೆ ಸಾರ್ವತ್ರಿಕ ಚುನಾವಣೆಗೆ ನಾಮಪತ್ರ ಸಲ್ಲಿಸಲು ಬುಧವಾರ ಕೊನೆಯ ದಿನವಾಗಿದ್ದ ಹಿನ್ನೆಲೆಯಲ್ಲಿ ಅಭ್ಯರ್ಥಿಗಳು ಅತ್ಯುತ್ಸಾಹದಿಂದ ತಮ್ಮ ಅಪಾರ ಬೆಂಬಲಿಗರೊಂದಿಗೆ ತಂಡೋಪತಂಡವಾಗಿ ಆಗಮಿಸಿ ಉಮೇದುವಾರಿಕೆ ಸಲ್ಲಿಸಿದರು. ಜನಜಂಗುಳಿಯಿಂದ ತುಂಬಿದ್ದ ನಗರಸಭೆ ಆವರಣ ಸುಮಾರು ಎಂಟು ವರ್ಷಗಳ ಅನಂತರ ಕಳೆಗಟ್ಟಿತ್ತು.

ಒಂದೆಡೆ, 2013ರ ಬಳಿಕ ಗದಗ-ಬೆಟಗೇರಿ ಸ್ಥಳೀಯ ಸಂಸ್ಥೆಯ ಚುನಾವಣೆ ನಡೆಯುತ್ತಿರುವುದು ಅವಳಿ ನಗರದ ಜನರಲ್ಲಿ ಸಂತಸ ಮೂಡಿಸಿದೆ. ಮತ್ತೊಂದೆಡೆ, ಟಿಕೆಟ್ ಸಿಕ್ಕ ಖುಷಿಯಲ್ಲಿದ್ದ ಅಭ್ಯರ್ಥಿಗಳಿಗೆ ಚುನಾವಣೆಯಲ್ಲಿ ಗೆಲುವಿನ ನಗೆ ಬೀರುತ್ತೇನೆ ಎಂಬ ಭಾವ ಎದ್ದು ಕಾಣಿಸುತ್ತಿತ್ತು. ಹೀಗಾಗಿ ಪಕ್ಷದ ನಾಯಕರೊಂದಿಗೆ, ಡೊಳ್ಳು ಮೇಳಗಳ ಮೆರವಣಿಗೆ, ಪಾದಯಾತ್ರೆ ಮೂಲಕ ಆಗಮಿಸಿ ನಾಮಪತ್ರ ಸಲ್ಲಿಸಿ ಚುನಾವಣಾ ಯುದ್ಧಕ್ಕೆ ಅಣಿಯಾದರು. ಇನ್ನು ನಾಮಪತ್ರ ಸಲ್ಲಿಸುವ ವೇಳೆ ಗೆದ್ದಿರುವ ಭಾವನೆಯಲ್ಲೇ ಅಭ್ಯರ್ಥಿ ಪರ ಬೆಂಬಲಿಗರು ಪಟಾಕಿ ಸಿಡಿಸಿ ಕುಣಿದು ಕುಪ್ಪಳಿಸಿದರು.

ಎಷ್ಟು ನಾಮಪತ್ರ?
ನಗರಸಭೆ ಚುನಾವಣೆಗೆ ಒಟ್ಟು 206 ನಾಮಪತ್ರಗಳು ಸಲ್ಲಿಕೆಯಾಗಿವೆ. ಅದರಲ್ಲಿ ಕಾಂಗ್ರೆಸ್ 49, ಬಿಜೆಪಿ 57, ಜೆಡಿಎಸ್ 13, ಪಕ್ಷೇತರ 74, ಕೆಆರ್‌ಎಸ್ 2, ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ, ಎಐಎಂ, ಎಂಐಎಂಐಎಂ ಹಾಗೂ ಎಎಪಿ ತಲಾ 1, ಎಐಎಂಐಎಂ 2, ರಾಣಿ ಚೆನ್ನಮ್ಮ ಪಕ್ಷದಿಂದ 5 ನಾಮಪತ್ರಗಳು ಸಲ್ಲಿಕೆಯಾಗಿವೆ. ಡಿ.10ರಂದು 1, ಡಿ. 13ರಂದು 25, ಡಿ. 14ರಂದು 52 ಸೇರಿ 85 ನಾಮಪತ್ರಗಳು ಸಲ್ಲಿಕೆಯಾಗಿದ್ದರು. ಕೊನೆಯ ದಿನವಾದ ಡಿ.15ರಂದು ಬರೊಬ್ಬರಿ 121 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.
ಜೆಡಿಎಸ್ ಪಕ್ಷದ ಅಭ್ಯರ್ಥಿಗಳ ವಿವರ
ಮಂಜುಶ್ರೀ ಹುಣಸಿಮರದ ಮತ್ತು ರಮೇಶ ಗಡಾದ
(ವಾರ್ಡ್ ನಂ.2), ಬಸವರಾಜ ಅಪ್ಪಣ್ಣವರ (ವಾರ್ಡ್ ನಂ.22), ಪೀರಜಾದೆ ನಿಜಾಮುದ್ದೀನ (ವಾ.ನಂ.25), ಕುಕನೂರು ತಬೀಜಮ್ಮ ಅಲ್ಲಾವುದ್ದೀನ (ವಾ.ನಂ.1), ಪೀರಜಾದೆ ಕತೀಬಾ (ವಾ.ನಂ.31), ಗೂಳಪ್ಪನವರ ಪ್ರೇಮಾ ಪ್ರಕಾಶ (ವಾ.ನಂ.33), ಸರೋಜ ಮೇಲಿನಮನಿ (ವಾ.ನಂ.35), ಮಲ್ಲಿಕಾರ್ಜುನ ಪರ್ವತಗೌಡ್ರ (ವಾ.ನಂ.15), ಶಿವರಾಜ ಖಾನಾಪುರ (ವಾ.ನಂ.15), ರೇಣುಕಾ ಕೆಂದೂರ (ವಾ.ನಂ.32), ಪುಷ್ಪಾ ಪತ್ತಾರ (ವಾ.ನಂ.11), ಯುನುಸ್ ಈಟಿ (ವಾ.ನಂ.10) ಹಾಗೂ ತಬಸ್ಸುಮ್ ಕುಕುನೂರ (ವಾ.ನಂ.2) ನಾಮಪತ್ರ ಸಲ್ಲಿಸಿದ್ದಾರೆ.
ವಿವಿಧ ಪಕ್ಷಗಳ ಅಭ್ಯರ್ಥಿಗಳ ವಿವರ
ಕೆ ಆರ್ ಎಸ್ ಪಕ್ಷದ ಶಾಂತಪ್ಪ ಚವಡಿ (ವಾ.ನಂ.22), ವೆಲ್ಫೇರ್ ಪಾರ್ಟಿ ಜೀವನಸಾಬ ಉಮಚಗಿ(ವಾ.ನಂ.22)
ಆಮ್ ಆದ್ಮಿ ಪಕ್ಷದ ಫಕ್ರುದ್ದೀನ ನಾಗನೂರ (ವಾ.ನಂ.22), ನಾಗರಾಜ ಬಸವ (ವಾ.ನಂ.10),
ರಾಣಿ ಚೆನ್ನಮ್ಮ ಪಕ್ಷದ ಮೇರಿ ರಾಜಾವೆಂಕಟೇಶ ಕಾರಬಾರಿ (ವಾ.ನಂ.4), ನಬಿದಾಬೇಗಂ ಕುರ್ತಕೋಟಿ (ವಾ.ನಂ.5), ತಯ್ಯಾಬ ಹೊಸಮನಿ (ವಾ.ನಂ.10), ಮೇರಿ ಕಾರಬಾರಿ (ವಾ.ನಂ.9), ಎಐಎಂಐಎಂ ಪಕ್ಷದ ಮಹ್ಮದ್ಆಸ್ರಿಕ್ ನಾಯ್ಕರ (ವಾ.ನಂ.22), ತಾಜುದ್ದೀನ ಬಳ್ಳಾರಿ (ವಾ.ನಂ.10) ಉಮೇದುವಾರಿಕೆ ಸಲ್ಲಿಸಿದ್ದಾರೆ.
ಪಕ್ಷೇತರ ಅಭ್ಯರ್ಥಿಗಳ ವಿವರ
ವಾರ್ಡ್ ನಂ.1 ಲಲಿತಾ(ಯಲ್ಲವ್ವ) ಎಸ್.ಚೋರಗಸ್ತಿ, ವಾರ್ಡ್ ನಂ.2 ಶಿವರಾಜ ಡಿ.ಕೋರಸ್, ಪ್ರಶಾಂತ ಪಿ.ಗೋಕಾಕ, ಮೋಹನ ಎಚ್.ಕಟ್ಟಿಮನಿ, ವಾರ್ಡ್ ನಂ.3 ಗೌಸಮೊದ್ದೀನ್ ಜೆ.ಹುಯಿಲಗೋಳ, ಮಂಜುನಾಥ ಎಚ್.ಮುಳಗುಂದ, ಅಶೋಕ ಎಚ್.ಮುಳಗುಂದ, ಪೂಜಾ ಎಂ.ಬೇವೂರ, ಹುಲ್ಲೇಶ ಭಜಂತ್ರಿ, ವಾರ್ಡ್ ನಂ.5 ಶಕುಂತಲಾ(ನಿವೇದಿತಾ) ಪಿ.ಗಟ್ಟಿ, ಭಾಗ್ಯಶ್ರೀ ಎ.ಭಸ್ಮೆ, ವಾರ್ಡ್ ನಂ.6 ಚನ್ನವ್ವ ಎಚ್.ಮುಳಗುಂದ, ನಂದಿನಿ ಎಂ.ಮುಳಗುಂದ, ಗೀತಾ ವಿ.ದ್ವಾಸಕೇರಿ, ಪಾರ್ವತಿ ಭಜಂತ್ರಿ, ಶಾರದಾ ಎ.ಚಲವಾದಿ, ಓಂಕಾರೇಶ್ವರಿ ಗೋಕಾಕ, ವಾರ್ಡ್ ನಂ.7 ಅಭಿಷೇಕ ಪತಂಗೆ, ತಿಮ್ಮಯ್ಯ ಕೊಂಗಲಿ, ವಾರ್ಡ್ ನಂ.8 ಕವಿತಾ ಗೋಕಾವಿ, ಸುನಂದಾ ಹುಲ್ಯಾಳ, ವಾರ್ಡ್ ನಂ.10 ರಿಯಾಜ ಮುಲ್ಲಾ, ಲೋಹಿತ್ ಬಿಳೆಎಲಿ, ಮಹೇಶ ಬಿ.ಗದಗಿನ, ಇಮ್ತಿಯಾಜ್ ಮಾನ್ವಿ, ಕಳಕಪ್ಪ ಹೋಳಿ, ಪರಮೇಶ ಕಾಳೆ, ವಾರ್ಡ್ ನಂ.11 ಲಲಿತಾ ನವೀನ, ಅಶ್ವಿನಿ ಪಿ.ಗೊಳಗೊಳಕಿ,

ವಾರ್ಡ್ ನಂ.13 ಶ್ರೀಕಾಂತ ಎಸ್.ನಾಯಿಯರ, ವಾರ್ಡ್ ನಂ.14 ಜಯಶ್ರೀ ಎಸ್.ಬೈರವಾಡಿ, ವಾರ್ಡ್ ನಂ.15 ವಿಶ್ವನಾಥ ಜಿ.ಶೀರಿ, ಬಸವರಾಜ ಬೆಳದಡಿ, ವಾರ್ಡ್ ನಂ.16 ಲಕ್ಷ್ಮಣ ಜಿ.ಹಳ್ಳಿಕೇರಿ, ಬಸವರಾಜ ಬೆಳದಡಿ, ಶಂಭುಲಿಂಗಪ್ಪ ಕಾಳೆ, ರಾಘವೇಂದ್ರ ಪಿ.ಪರಾಪುರ, ಹಾಜಿಅಲಿ ಹಾರುನ್‌ಜಾಪರ್ ಕೊಪ್ಪಳ, ವಾರ್ಡ್ ನಂ.17 ಆಸ್ಮಾ ಎಂ.ರಶ್ಮಿ, ವಾರ್ಡ್ ನಂ.18 ವಿಜಯ ಕಲ್ಮನಿ, ಗಣೇಶ ಹುಬ್ಬಳ್ಳಿ, ಕಮನದಾರ ಅಬ್ದುಲ್ ಖಾದರ ಜೈಲಾನಿ, ವಾರ್ಡ್ ನಂ.19 ಓಂಕಾರಸಾ ಎಚ್.ಬಾಕಳೆ, ಶ್ರೀಚೇತನ್ ಪಿ.ಇರಕಲ್, ಫಕ್ಕೀರಪ್ಪ ಜಡಿ, ವಾರ್ಡ್ ನಂ.20 ಸ್ನೇಹಲತಾ ಎಂ.ಕುರ್ತಕೋಟಿ, ಸೈನಾಜಬೇಗಂ ಸಿ.ಕೊಟ್ಟೂರ, ಗಂಗವ್ವ ಬನ್ನಿಮರದ, ವಾರ್ಡ್ ನಂ.21 ಸಿದ್ದಲಿಂಗಪ್ಪ ತುರಕಾನಿ, ಶಿವಪ್ಪ ಮುಳ್ಳಾಳ, ಮಹಬೂಬಸಾಬ ನದಾಫ, ಹೇಮಣ್ಣ ಗಿಡ್ಡಹನಮಣ್ಣನವರ, ಮಂಜುನಾಥ ಬಿ.ಮುಳಗುಂದ, ವಾರ್ಡ್ ನಂ.22 ವಸಂತ ಪಡಗದ, ಫಾರೂಕ ಅಹ್ಮದ್ ಮುಲ್ಲಾ, ವಾರ್ಡ್ ನಂ.23 ಮಹೇಶ ನಾರಾಯಣ ರೋಖಡೆ, ಮಹ್ಮದಶಾಹಿದ್ ಮುಲ್ಲಾ, ವಾರ್ಡ್ ನಂ.24 ಬಸವರಾಜ ಕುರ್ತಕೋಟಿ, ಎಲ್.ಹನಮಂತಪ್ಪ ಯರಗುಡಿ, ಸುರೇಶ್ ಬೆಳದಡಿ, ವಾರ್ಡ್ ನಂ.25 ಪ್ರಫುಲ್ಲದಾಸ ಪುಣೆಕರ್, ರವೀಂದ್ರ ಸಿದ್ದಲಿಂಗ್, ವಾರ್ಡ್ ನಂ.26 ಶಕೀಲಾ ಅಬ್ಬಿಗೇರಿ, ವಾರ್ಡ್ ನಂ.27 ಮಾಲಿನಬಿ ಹೊಸಳ್ಳಿ, ವಾರ್ಡ್ ನಂ.28 ಮಹಾಲಕ್ಷ್ಮಿ ಡಂಬಳ, ವಾರ್ಡ್ ನಂ.29 ಪರಮೇಶ್ ವೀರಾಪುರ, ವಾರ್ಡ್ ನಂ.32 ಆಶಾಬಿ ಉಳ್ಳಾಗಡ್ಡಿ, ವಾರ್ಡ್ ನಂ.33 ಶೋಭಾ ಸಿದ್ದಲಿಂಗ, ವಾರ್ಡ್ ನಂ.34 ವಂದನಾ ಚಂದ್ರಕಾಂತ ವೇರ್ಣೆಕರ್, ಸೀತಲಾ ಲಮಾಣಿ, ಸವಿತಾ ಜಗ್ಗಲ ಹಾಗೂ ವಾರ್ಡ್ ನಂ.35 ವರದಾ ಭಜಂತ್ರಿ ನಾಮಪತ್ರ ಸಲ್ಲಿಸಿದ್ದಾರೆ.