ವಿಜಯಸಾಕ್ಷಿ ಸುದ್ದಿ, ನರಗುಂದ:
ನಗು ಜೀವನಕ್ಕೆ ಔಷಧಿ ಇದ್ದಂತೆ. ಪ್ರತಿಯೊಬ್ಬರೂ ಜೀವನದಲ್ಲಿ ನಗು-ನಗುತ್ತಾ ಬಾಳಬೇಕು. ಇಂದಿನ ಒತ್ತಡದ ಬದುಕಿನಲ್ಲಿ ನಗುವಿಗೆ ಅವಕಾಶ ಕಡಿಮೆಯಾಗಿದೆ. ಈ ಒತ್ತಡದ ಬದುಕಿನಿಂದ ಹೊರಬರಲು ನಗುವೇ ದಿವ್ಯ ಔಷಧ ಎಂದು ಕಸಾಪ ಅಧ್ಯಕ್ಷರಾದ ಬಿ.ಸಿ ಹನಮಂತಗೌಡ್ರ ಹೇಳಿದರು.
ಅವರು, ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ವಾಣಿಜ್ಯ ಸೌರಭ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕಾಲೇಜ್ ಪ್ರಾಚಾರ್ಯರಾದ ಪ್ರೊ. ಸಿ. ಎಸ್ ಸುಳ್ಳದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಗಣ್ಯ ವ್ಯಾಪಾರಸ್ಥರಾದ ಜಿ ಟಿ ಗುಡಿಸಾಗರ, ಬಿ ಎಮ್ ಲೆಂಕನ್ನವರ, ಎಸ್ ಬಿ ಭಜಂತ್ರಿ, ವೇದಿಕೆ ಮೇಲೆ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಸುಧೀರ ಸಜ್ಜನ, ಎಸ್ ಸಿ ಸುರಕೊಂಡ, ಸುಜಾತಾ ಮೆಳವಂಕಿ,ಲಕ್ಷ್ಮೀ ಕಲ್ಲಾಪೂರ, ಎಸ್ ಹಿರೇಮನಿ, ಚನ್ನು ನೀಲಗುಂದ, ರಮೇಶ ಐನಾಪೂರ, ಕಾಲೆಜು ವಿಧ್ಯಾರ್ಥಿ, ವಿಧ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.