ವಿಜಯಸಾಕ್ಷಿ ಸುದ್ದಿ, ಚಿತ್ರದುರ್ಗ
- ಸಿಎಂ ಬಿಎಸ್ ವೈ ಬದಲಾವಣೆಗೆ ಮುರುಘಾ ಶ್ರೀ ಆಕ್ಷೇಪ
- ನಿರ್ಲಕ್ಷಿಸಿದರೆ ಮುಂದೆ ಪಕ್ಷಕ್ಕೆ ಭಾರಿ ನಷ್ಟ ಉಂಟಾಗುವ ಸಾಧ್ಯತೆ!
ಸಿಎಂ ಬಿ.ಎಸ್. ಯಡಿಯೂರಪ್ಪ ಅವರನ್ನು ನಿರ್ಲಕ್ಷ್ಯ ಮಾಡಿದರೆ ಪಕ್ಷಕ್ಕೆ ಮುಂದೆ ಭಾರಿ ನಷ್ಟವಾಗಲಿದೆಂಬ ಭಾವನೆ ಇದೆ ಎಂದು ಚಿತ್ರದುರ್ಗದ ಮುರುಘಾಮಠದ ಶಿವಮೂರ್ತಿ ಮುರುಘಾ ಶ್ರೀಗಳು ಹೇಳಿದ್ದಾರೆ.
ಸಿಎಂ ಬಿ.ಎಸ್. ವೈ ತಮ್ಮ ರಾಜಕೀಯ ಜೀವನವನ್ನು ಏಕ ವ್ಯಕ್ತಿಯಾಗಿ ಆರಂಭಿಸಿ, ಬಿಜೆಪಿಯನ್ನು ತಳಮಟ್ಟದಿಂದ ಸಂಘಟನೆ ಮಾಡಿದ್ದಾರೆ. ಈ ಹಂತದಲ್ಲಿ ನಾಯಕತ್ವ ಬದಲಾವಣೆ ಸಮಂಜಸವಲ್ಲ ಎಂದು ಹೇಳಿದ್ದಾರೆ.
ದಕ್ಷಿಣ ಭಾರತದಲ್ಲಿ ಬಿಜೆಪಿ ಸರ್ಕಾರ ರಚನೆ ಹೆಗ್ಗಳಿಕೆ ಅವರದ್ದು, ನೇರ ನುಡಿ, ಧೀರ ನಡೆಗೆ ಯಡಿಯೂರಪ್ಪ ಹೆಸರಾದವರು. ಪ್ರತಿ ಚುನಾವಣೆ ಅವರ ಮುಂದಾಳತ್ವದಲ್ಲಿ ನಡೆಯುತ್ತಾ ಬಂದಿವೆ. ಪಕ್ಷದ ಸಂಘಟನೆಗೆ ಅಪಾರವಾಗಿ ಶ್ರಮಿಸಿದ್ದು, ಅವರ ಬಗ್ಗೆ ಜನರಲ್ಲಿ ಉತ್ತಮ ಭಾವನೆ ಇದೆ ಎಂದರು.
ರಾಜ್ಯಕ್ಕೆ ಹಲವಾರು ಕೊಡುಗೆಗಳನ್ನು ನೀಡಿದ್ದಾರೆ. ಅಂಥ ಮೇಧಾವಿ, ಮುತ್ಸದ್ಧಿ ಮುಖಂಡರು. ಇಂತಹ ನಾಯಕನನ್ನು ಗೌರವದಿಂದ ನಡೆಸಿಕೊಳ್ಳುವುದು ಸೂಕ್ತ ಎಂದು ಡಾ.ಶಿವಮೂರ್ತಿ ಮುರುಘಾ ಶರಣರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.