ವಿಜಯಸಾಕ್ಷಿ ಸುದ್ದಿ, ಕೊಪ್ಪಳ
ಕೊಪ್ಪಳ ಕರ್ನಾಟಕ ವಾರಿಯರ್ಸ್ ಕ್ರೀಡಾ ಹಾಗೂ ಸಾಂಸ್ಕೃತಿಕ ಸಂಸ್ಥೆ ಮಾರ್ಚ್ 13 ಮತ್ತು 14ರಂದು ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಮಾತೃಶ್ರೀ (ಅವ್ವ) ಕಪ್ ಕ್ರಿಕೆಟ್ ಟೂರ್ನಮೆಂಟ್ ಆಯೋಜಿಸಿದೆ.
ಸಂಸ್ಥೆಯು ಪ್ರತಿ ಸಲ ವಿಭಿನ್ನ ಹೆಸರುಗಳ ಟೂರ್ನಮೆಂಟ್ ಆಯೋಜಿಸುತ್ತಾ ಬಂದಿದ್ದು, ಈ ಸಲ ಮಹಿಳೆಯರಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಮಾತೃಶ್ರೀ (ಅವ್ವ) ಎಂಬ ಹೆಸರಿನಡಿ ವಿಜೇತ ತಂಡಗಳಿಗೆ ಕಪ್ ನೀಡಲಿದೆ.
ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ನೇತೃತ್ವದ ಜಿಲ್ಲಾಧಿಕಾರಿ ಕಚೇರಿ ನೌಕರರ ಜೀಜಾ ಮಾತಾ ತಂಡ, ಎಸ್‌ಪಿ ಟಿ.ಶ್ರೀಧರ್ ನೇತೃತ್ವದ ಪೊಲೀಸ್ ಇಲಾಖೆಯ ನೌಕರರ ಕಿರಣ್ ಬೇಡಿ ತಂಡ, ಜಿಪಂ ಸಿಇಓ ರಘುನಂದನ್ ಮೂರ್ತಿ ನೇತೃತ್ವದ ಜಿಪಂ ನೌಕರರ ಅಮ್ಮ ತಂಡ, ವಕೀಲರ ಜಸ್ಟೀಸ್ ಭಾನುಮತಿ ತಂಡ, ಬಾಗಲಕೋಟೆ ಅತಿಥಿಗಳ ಅಕ್ಕಮಹಾದೇವಿ ತಂಡ ಹಾಗೂ ಸಂಸ್ಥೆಯ ಶ್ರೀನಿವಾಸ್ ಗೋಂಧಳಿ ನೇತೃತ್ವದ ದಾನ ಚಿಂತಾಮಣಿ ಅತ್ತಿಮಬ್ಬೆ ತಂಡ, ಸಿದ್ದು ನೇತೃತ್ವದ ಮದರ್ ಥೇರೇಸಾ ತಂಡ, ಚಂದ್ರಕಾಂತ ದೇಶಪಾಂಡೆ ನೇತೃತ್ವದ ಕಿತ್ತೂರುರಾಣಿ ಚನ್ನಮ್ಮ ತಂಡ, ವಿನೋದ್‌ಕುಮಾರ್ ನೇತೃತ್ವದ ಒನಕೆ ಓಬವ್ವ ತಂಡ ಹಾಗೂ ಸಲೀಲ್ ನೇತೃತ್ವದ ಝಾನ್ಸಿರಾಣಿ ಲಕ್ಷ್ಮೀಬಾಯಿ ತಂಡಗಳು
ಸೇರಿದಂತೆ ಒಟ್ಟು ಹತ್ತು ತಂಡಗಳು ಈ ಟೂರ್ನಮೆಂಟ್‌ನಲ್ಲಿ ಸೆಣಸಲಿವೆ.
ಮಾರ್ಚ್ 13ರಂದು ಬೆಳಗ್ಗೆ 7 ಗಂಟೆಗೆ ಟೂರ್ನಮೆಂಟ್‌ನ ಉದ್ಘಾಟನೆ ನಡೆಯಲಿದ್ದು, ಡಿಸಿ, ಎಸ್ಪಿ, ಕ್ಲಬ್‌ನ ಗೌರವಾಧ್ಯಕ್ಷ ಬಸವರಾಜ ಕರುಗಲ್, ಅಧ್ಯಕ್ಷ ವಿನೋದ್ ಚಿನ್ನಿನಾಯ್ಕರ್, ಮುಖ್ಯಸ್ಥ ಗಿರೀಶ್ ಮುಂಡಾದ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ. ಟೂರ್ನಮೆಂಟ್‌ನ ಮೊದಲ ಪಂದ್ಯ ಬೆಳಗ್ಗೆ 7-30ಕ್ಕೆ ಆರಂಭಗೊಳ್ಳಲಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.