ವಿಜಯಸಾಕ್ಷಿ ಸುದ್ದಿ, ಗದಗ
ಪಂಚಮಸಾಲಿ ಸಮಾಜಕ್ಕೆ 2’A’ ಮೀಸಲಾತಿ ನೀಡುವಂತೆ
ಕೂಡಲ ಸಂಗಮದ ಪಂಚಮಸಾಲಿ ಪೀಠದ ಜಯ ಮೃತ್ಯುಂಜಯ ಸ್ವಾಮೀಜಿ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.
ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಈ ಬಗ್ಗೆ ಮಾತನಾಡಿದ ಅವರು, ಪಂಚಮಸಾಲಿ ಸಮಾಜಕ್ಕೆ 2’A’ ಮೀಸಲಾತಿ ನೀಡುವಂತೆ ಮತ್ತು ಕೇಂದ್ರ ಸರ್ಕಾರದ ಒಬಿಸಿ ಸೇರ್ಪಡೆಗೆ ಸರ್ಕಾರಕ್ಕೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದರೂ ಸೂಕ್ತವಾದ ಪರಿಹಾರ ಸಿಕ್ಕಿಲ್ಲ ಎಂದರು.
ಈ ನಿಟ್ಟಿನಲ್ಲಿ ‘ಪಂಚಮಸಾಲಿ ನಡೆ, ವಿಧಾನ ಸೌಧದ ಕಡೆಗೆ’ ಎಂಬ ಘೋಷವಾಕ್ಯದೊಂದಿಗೆ ಜ.14 ರಂದು ಕೂಡಲ ಸಂಗಮದಿಂದ
ಇಳಕಲ್, ಕುಷ್ಟಗಿ, ಯಲಬುರ್ಗಾ, ಕೊಪ್ಪಳ, ಹರಿಹರ, ತುಮಕೂರು ಮಾರ್ಗವಾಗಿ ಬೆಂಗಳೂರುವರೆಗೆ ಸುಮಾರು 1 ಲಕ್ಷ ಜನರು ಪಾದಯಾತ್ರೆ ಮಾಡಿ ಬಜೆಟ್ ಅಧಿವೇಶನ ನಡೆಯುವ ಸಂದರ್ಭದಲ್ಲಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಸ್ವಾಮೀಜಿ ಹೇಳಿದರು.
ಪಂಚಮಸಾಲಿ ಸಮಾಜದಿಂದ ಪಂಚ ಲಕ್ಷ ಹೆಜ್ಜೆಯ ಮೂಲಕ ಹೋರಾಟ ಮಾಡುತ್ತೇವೆ. ಭೂಮಿ ತಾಯಿಯ ಮಕ್ಕಳ ನೋವು, ಸಂಕಟವನ್ನು ರಾಜ್ಯದ ದೊರೆಯಾಗಿರುವ ಮುಖ್ಯಮಂತ್ರಿ ಅವರಿಗೆ ತೋರಿಸುತ್ತೇವೆ ಎಂದು ಪಂಚಮಸಾಲಿ ಪೀಠದ ಜಯ ಮೃತ್ಯುಂಜಯ ಸ್ವಾಮೀಜಿ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.