ಪಂಚಾಯತಿಗೆ ಬೀಗ ಜಡಿದು ಪ್ರತಿಭಟನೆ

0
Spread the love

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಹರಪನಹಳ್ಳಿ
ಕುಡಿಯುವ ನೀರಿಗೆ ಆಗ್ರಹಿಸಿ ತಾಲೂಕಿನ ಮತ್ತಿಹಳ್ಳಿ ಗ್ರಾಮಸ್ಥರು ಗ್ರಾಮ ಪಂಚಾಯತಿ ಕಾರ್ಯಾಲಯದ ಮುಂದೆ ಖಾಲಿ ಕೊಡಗಳ ಹಿಡಿದು ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ಯನ್ನುದ್ದೇಶಿಸಿ ಮೈದೂರು ರಾಮಣ್ಣ ಮಾತನಾಡಿ, ಪಂಚಾಯಿತಿಯ ವ್ಯಾಪ್ತಿಯಲ್ಲಿ ಬರುವ ಮತ್ತಿಹಳ್ಳಿ, ಎನ್. ಶಿರನಹಳ್ಳಿ, ಆಲದಹಳ್ಳಿ, ಹಗರಿಶಿರನಹಳ್ಳಿ ಮತ್ತು ಪುಣ್ಯ ನಗರ ಗ್ರಾಮಗಳಲ್ಲಿ ಹಲವಾರು ವರ್ಷಗಳಿಂದ ನೀರಿನ ಸಮಸ್ಯೆ ಇದ್ದೆ ಇದೆ. ಆದರೆ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡು ಕೊಳ್ಳಲು ಸಾಧ್ಯವಾಗಿತ್ತಿಲ್ಲ ಎಂದು ಹೇಳಿದರು.
ಬಳ್ಳಾರಿ ಜಿಲ್ಲಾ ಮಂತ್ರಿಗಳು ಹಾಗೂ ಶಾಸಕರು ಜಿಲ್ಲಾ ಪಂಚಾಯತ ಸಿಇಓ ಅವರು ಮತ್ತಿಹಳ್ಳಿ ಗ್ರಾಮಕ್ಕೆ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕಾಗಿದೆ. ಕಳೆದ ಎರಡು ತಿಂಗಳಿಂದ ಕುಡಿಯುವ ನೀರಿನ ಸಮಸ್ಯೆ ಇದ್ದು, ತುಂಬಾ ಸಂಕಷ್ಟದಲ್ಲಿ ಜೀವನ ನಡೆಸುತ್ತಿದ್ದೇವೆ ಎಂದು ಗ್ರಾಮದ ಜನರು ಪಂಚಾಯತಿ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದರು.
ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯತ್ ಅಧಿಕಾರಿಗಳ ಬೇಜವಾಬ್ದಾರಿತನದಿಂದ ಮತ್ತಿಹಳ್ಳಿ ಗ್ರಾಮ ಪಂಚಾಯಿತಿಯ ಸುಮಾರು ಹತ್ತು ಸಾವಿರ ಜನರಿಗೆ ಕುಡಿಯುವ ನೀರು ಸೇರಿದಂತೆ ಸ್ವಚ್ಚತೆ ಬೀದಿ ದೀಪ ನಿರ್ವಹಣೆ ಮತ್ತು ಅಭಿವೃದ್ಧಿ ಕುಂಠಿತವಾಗಿದೆ. ಕಳೆದ ಎರಡು ತಿಂಗಳಿಂದ ಗ್ರಾಮಪಂಚಾಯಿತಿ ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯತ್‌ಗೆ ಆಲೆದು ಅಲೆದು ಸುಸ್ತಾಗಿ, ನೀರು ತರುವ ಬಂಡಿ ಹಾಗೂ ಖಾಲಿ ಕೊಡಗಳೊಂದಿಗೆ ಗ್ರಾಮಸ್ಥರು ಪಂಚಾಯತಿ ಕಚೇರಿ ಬಾಗಿಲು ಹಾಕಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ನಿರ್ಗಮಿತ ಅಧ್ಯಕ್ಷೆ ಚೆನ್ನಮ್ಮ ರಾಮಣ್ಣ, ಮೈದೂರು ರಾಮಣ್ಣ, ಡಿ ಶೇಖರಪ್ಪ, ಎಂ ಕೋಟ್ಯಪ್ಪ, ಮರಳುಸಿದ್ದಪ್ಪ, ಸಿದ್ದಪ್ಪ, ಚಂದ್ರೇಗೌಡ, ಕೋಟ್ರೇಶ, ಎರಿತಾತಾ, ನಿಂಗಜ್ಜ, ಶಿವಣ್ಣ, ಕರಿಯವ್ವ, ಬಸಮ್ಮ, ಕೆ ಸಿದ್ದಪ್ಪ, ಬಸವರಾಜ, ಕೆ ಶಿವಕುಮಾರ್, ಕೊಟ್ರೇಶ್, ಉಳ್ಳೇರ್ ಕೊಟ್ರಪ್ಪ, ಕೆಂಚಪ್ಪ, ಗಣೇಶ, ನಾಗಪ್ಪ, ಎಂ ನಾಗರಾಜ್, ನಾಗೇಂದ್ರಪ್ಪ, ಮಂಜಪ್ಪ, ಹಾಲಪ್ಪ, ಮರಿಯಪ್ಪ ಸೇರಿದಂತೆ ಗ್ರಾಮಸ್ಥರು ಇದ್ದರು.

Advertisement

Spread the love

LEAVE A REPLY

Please enter your comment!
Please enter your name here