ವಿಜಯಸಾಕ್ಷಿ ಸುದ್ದಿ, ಕಲಬುರಗಿ: ಪೊಲೀಸರ ಬಳಿ ಮೋಸ ಹೋದವರು ಹೋಗಿ ದೂರು ನೀಡುವುದು ಎಲ್ಲೆಡೆ ಕಾಮನ್. ಆದರೆ ಇಲ್ಲೊಬ್ಬ ಪಿಎಸ್ಐ ಅವರು ಸ್ವತಃ ತಾವೇ ಖತರ್ನಾಕ್ ಖದೀಮನ ವಂಚನೆಗೊಳಗಾಗಿ ಲಕ್ಷಾಂತರ ರೂಪಾಯಿ ಹಣ ಕಳೆದುಕೊಂಡಿದ್ದಾರೆ.
ಹೌದು ಈ ಘಟನೆ ನಡೆದಿರೋದು ಕಲಬುರಗಿಯಲ್ಲಿ ಇಲ್ಲಿನ ಡಿಸಿಬಿ ಪಿಎಸ್ಐ ಮಂಜುನಾಥ ಹೂಗಾರ ಮೋಸಗಾರನ ಮಾತು ನಂಬಿ ಹಣ ಕೊಟ್ಟು ಮೋಸ ಹೋಗಿದ್ದಾರೆ. ಇನ್ನು ಸ್ಥಳೀಯ ಚಾನಲ್ ವೊಂದರ ವರದಿಗಾರ ಎಂದು ಹೇಳಿಕೊಂಡಿರುವ ಖಾಸಿಂ ಪಟೇಲ್ ಪಿಎಸ್ಐ ಮಂಜುನಾಥ್ ಅವರಿಗೆ ಚಳ್ಳೆ ಹಣ್ಣು ತಿನಿಸಿರುವ ಖತರ್ನಾಕ್ ಖದೀಮನಾಗಿದ್ದಾನೆ.
ಕಲಬುರಗಿ ಎಸ್ಪಿ ನನಗೆ ತುಂಬಾ ಕ್ಲೋಸ್ ಅಂತ ಹೇಳಿ ಪಿಎಸ್ಐ ಕಡೆಯಿಂದಲೇ ಲಕ್ಷಾಂತರ ರೂಪಾಯಿ ಸುಲಿಗೆ ಮಾಡಿದ ಖತರ್ನಾಕ್ ಆಸಾಮಿ ಖಾಸೀಂ ಪಟೇಲ್ ಈಗ ಅಂದರ್ ಆಗಿದ್ದಾನೆ.
ಇದು SP ಮೇಡಂ ಮೇಡಂರ ಪರ್ಸನಲ್ ನಂಬರ್ ಅಂತ ಬೇರೊಂದು ನಂಬರ್ ನೀಡಿದ್ದ. ಎಸ್ಪಿ ಅವರ ಡಿಪಿ ನೋಡಿ ಎಸ್ಪಿ ಎಂದೇ ನಂಬಿ ಚಾಟ್ ಮಾಡಿದ್ದ ಪಿಎಸ್ಐ ಮಂಜುನಾಥ ಹೂಗಾರ 8 ಲಕ್ಷ 50 ಸಾವಿರ ರೂಪಾಯಿ ಕೊಟ್ಟಿದ್ದ. ನಂತರ ಅನುಮಾನಗೊಂಡು ಎಸ್ಪಿ ಅವರನ್ನು ಭೇಟಿ ಮಾಡಿದಾಗ ನಿಜಾಂಶ ಬಯಲಾಗಿದ್ದು, ತಾನು ಮೋಸ ಹೋಗಿದ್ದಾಗಿ ತಿಳಿದ ಪಿಎಸ್ಐ ಮಂಜುನಾಥ್ ದೂರು ನೀಡಿದ್ದರು.
ಪಿಎಸ್ಐ ನೀಡಿದ ದೂರು ಆಧರಿಸಿ ಆರೋಪಿ ಖಾಸಿಂ ಪಟೇಲ್ ನನ್ನು ಕಲಬುರಗಿ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಆದರೆ ಪಿಎಸ್ಐ ಮಂಜುನಾಥ್ ಎಸ್ಪಿ ಗೆಸರು ಹೇಳಿದ ಕೂಡಲೇ ಲಕ್ಷಾಂತರ ರೂಪಾಯಿ ಹಣ ನೀಡಿದ ಉದ್ದೇಶವೇನು ಎನ್ನೋ ವಿಚಾರ ಮಾತ್ರ ಹೊರಬರಬೇಕಿದೆ.