ವಿಜಯಸಾಕ್ಷಿ ಸುದ್ದಿ, ದಾವಣಗೆರೆ
ಪೆಟ್ರೋಲ್ ಹಣ ಪ್ರಧಾನಿ ಮೋದಿ ಅಕೌಂಟ್ ಗೆ ಹೋಗುತ್ತದೆ. ಪ್ರಧಾನಿ ಮೋದಿಯವರದ್ದು ಬೇರೊಂದು ಅಕೌಂಟ್ ಇದೆ ಎಂದು ಕೇಂದ್ರದ ಮಾಜಿ ಸಚಿವ ಕೆ. ಮುನಿಯಪ್ಪ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಜಿಲ್ಲೆಯ ಮಾಯಕೊಂಡದಲ್ಲಿ ಪೆಟ್ರೋಲ್, ಡೀಸೆಲ್ ಹಾಗೂ ಅಗತ್ಯ ವಸ್ತುಗಳ ದರ ಏರಿಕೆ ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ಈ ರೀತಿ ಹೇಳಿಕೆ ನೀಡಿದ್ದಾರೆ.
ಹೆಚ್ಚಿನ ಹಣ ಪ್ರಧಾನಿಯ ಬೇರೆ ಅಕೌಂಟ್ ಗೆ ಹೋಗುತ್ತದೆ. ಆದರೆ, ಈ ಹಣ ಬಡವರಿಗಾಗಲಿ ದೇಶದ ಜನರ ಕಲ್ಯಾಣಕ್ಕೆ ಆಗಲಿ ಬಳಕೆಯಾಗುವುದಿಲ್ಲ. ಹಿಂದೆ ನಾವು ಅಧಿಕಾರಿದಲ್ಲಿದ್ದ ಸಂದರ್ಭದಲ್ಲಿ ಪೆಟ್ರೋಲ್ ರೂ. 50 – 60ರ ಆಸುಪಾಸಿನಲ್ಲಿತ್ತು. ಆಗ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ರೂ. 120 ಪೆಟ್ರೋಲ್ ದರವಿತ್ತು. ಆ ಸಂದರ್ಭದಲ್ಲಿಯೇ ಕಾಂಗ್ರೆಸ್ ಸರ್ಕಾರ ಜನರ ಹಿತದೃಷ್ಟಿಯಿಂದ ಅರ್ಧದಷ್ಟು ಬೆಲೆಗೆ ಜನರಿಗೆ ಇಂಧನ ನೀಡುತ್ತಿದ್ದೇವು.
ಆದರೆ, ಸದ್ಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪೆಟ್ರೋಲ್, ಡೀಸೆಲ್ ದರ ರೂ. 50ರಷ್ಟಿದೆ. ದರ ಮಾತ್ರ ದೇಶದ ಒಲಗೆ ಡಬಲ್ ಆಗಿದೆ. ಇದರಿಂದ ಮೋದಿ ಜನಸಾಮಾನ್ಯರ ಮೇಲೆ ಹೊರೆ ಹಾಕಿದ್ದಾರೆ. ಜನರನ್ನು ಶೋಷಣೆ ಮಾಡುತ್ತಿದ್ದಾರೆ. ಇದರಿಂದಾಗಿ ಬಡವರಿಗೆ ತುಂಬಾ ತೊಂದರೆಯಾಗುತ್ತಿದೆ ಎಂದು ಗುಡುಗಿದ್ದಾರೆ.