ವಿಜಯಸಾಕ್ಷಿ ಸುದ್ದಿ, ಗದಗ
ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಸಂಪೂರ್ಣ ಲಾಕ್ ಡೌನ್ ಜಾರಿ ಮಾಡಿದ್ದು, ಮದ್ಯ ಮಾರಾಟಕ್ಕೆ ನಿಷೇಧ ನಿರ್ಬಂಧ ಹೇರಲಾಗಿದೆ.
ಆದರೆ ಇದನ್ನೇ ಬಂಡವಾಳ ಮಾಡಿಕೊಂಡಿದ್ದ ಹುಲಕೋಟಿಯ ಅಳಿಯ- ಮಾವನನ್ನು ಗ್ರಾಮೀಣ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

ಮದ್ಯವನ್ನು ಅಕ್ರಮವಾಗಿ ಸಂಗ್ರಹದ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಎಸ್ಪಿ ಯತೀಶ್ ಎನ್, ಡಿವೈಎಸ್ಪಿ ಶಿವಾನಂದ ಪವಾಡಶೆಟ್ಟರ್, ಸಿಪಿಐ ರವಿಕುಮಾರ್ ಕಪ್ಪತನವರ್ ಮಾರ್ಗದರ್ಶನದಲ್ಲಿ ಪಿಎಸ್ಐ ಅಜಿತಕುಮಾರ್ ಹೊಸಮನಿ ಹಾಗೂ ಸಿಬ್ಬಂದಿ ದಾಳಿ ಮಾಡಿ ಇಬ್ಬರನ್ನು ಬಂಧಿಸಿ ಲಕ್ಷಾಂತರ ರೂ,ಮೌಲ್ಯದ ಮದ್ಯ ವಶಪಡಿಸಿಕೊಂಡಿದ್ದಾರೆ.
ಹುಲಕೋಟಿ ಸಮೀಪದ ಕೆಇಬಿ ಗ್ರಿಡ್ ಬಳಿ ಇರುವ ಮನೆಯಲ್ಲಿ ಈ ಮದ್ಯ ಸಂಗ್ರಹಿಸಿದ್ದ ಅಮೃತೇಶ್ವರ ವೀರಪ್ಪ ಸಾಲಗಡಗಿ ಹಾಗೂ ಶ್ರೀಕಾಂತ್ ಶಿವಲಿಂಗಪ್ಪ ಹರ್ಲಾಪೂರ ಎಂಬುವವರನ್ನು ಬಂಧಿಸಲಾಗಿದೆ.
ಒಟ್ಟು 1ಲಕ್ಷ 43 ಸಾವಿರದ 390 ರ ಮೌಲ್ಯದ ಮದ್ಯ ವಶಪಡಿಸಿಕೊಳ್ಳಲಾಗಿದೆ. ಈ ಕಾರ್ಯಾಚರಣೆಯಲ್ಲಿ ವಿ ಎಚ್ ಅಜ್ಜಿ, ಎನ್ ಎ ಮೌಲ್ವಿ, ಆರ್ ಬಿ ಕೊಟ್ಟೂರು, ಎಸ್ ಎಸ್ ಮಾವಿನಕಾಯಿ, ಪ್ರವೀಣ್ ಶಾಂತಪ್ಪನವರ್, ಯಲ್ಲಪ್ಪ ಕರಮುಡಿ ಪಾಲ್ಗೊಂಡಿದ್ದರು.

