ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ
ಮೂರು ಪ್ರತ್ಯೇಕ ಮನೆಕಳ್ಳತನ ಪ್ರಕರಣ ಬೇಧಿಸಿರುವ ಲಕ್ಷ್ಮೇಶ್ವರ ಪೊಲೀಸರು ಆರೋಪಿಯನ್ನು ಬಂಧಿಸಿ 153 ಗ್ರಾಂ ಚಿನ್ನದ ಆಭರಣ ಹಾಗೂ ದ್ವಿಚಕ್ರ ವಾಹನ ವಶಪಡಿಸಿಕೊಂಡಿದ್ದಾರೆ.
ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಹೊಸಳ್ಳಿ ಗ್ರಾಮದ ಶಿವಕುಮಾರ ವಿರುಪಾಕ್ಷಪ್ಪ ಗರಡ್ಡಿ ಬಂಧಿತ ಆರೋಪಿ.
ಕಳೆದ ಫೆ.28ರಂದು ಶಿಗ್ಲಿ ಗ್ರಾಮದಲ್ಲಿ ಉಮಾ ಚೆನ್ನಯ್ಯ ಹಿರೇಮಠ ಎಂಬುವವರ ಮನೆ ಕಳ್ಳತನವಾಗಿ 37 ಗ್ರಾಂ ಚಿನ್ನಾಭರಣ, ಕೊಕ್ಕರಗುಂದಿ ಗ್ರಾಮದ ವಸಂತಗೌಡ ಪಾಟೀಲ ಅವರ ಮನೆಗೆ ಕನ್ನ ಹಾಕಿ 10 ಗ್ರಾಂ ಚಿನ್ನಾಭರಣ, ಲಕ್ಷ್ಮೇಶ್ವರ ನಗರದ ಜಯಶ್ರೀ ಮತ್ತಿಕಟ್ಟಿ ಅವರ ಮನೆಯಲ್ಲಿ ಕಳ್ಳತನಕ್ಕೆ ವಿಫಲ ಯತ್ನ ನಡೆಸಿದ ಪ್ರಕರಣ ಲಕ್ಷ್ಮೇಶ್ವರ ಠಾಣೆಯಲ್ಲಿ ದಾಖಲಾಗಿದ್ದವು.
ಕಳ್ಳರ ಪತ್ತೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್, ಡಿವೈಎಸ್ಪಿ ಶಿವಾನಂದ ಪವಾಡಶೆಟ್ಟಿ, ಶಿರಹಟ್ಟಿ ಸಿಪಿಐ ವಿಕಾಸ ಲಮಾಣಿ ಅವರ ಮಾರ್ಗದರ್ಶನದಲ್ಲಿ ಪಿಎಸ್ ಐ ಪ್ರಕಾಶ ಡಿ. ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು.
ಖಚಿತ ಮಾಹಿತಿ ಆಧರಿಸಿ ಪಿಎಸ್ ಐ ಪ್ರಕಾಶ ಡಿ, ಸಿಬ್ಬಂದಿ ಎಂ.ಡಿ ಲಮಾಣಿ, ಎಂ.ಬಿ.ವಡ್ಡಟ್ಟಿ, ಎಚ್.ಐ.ಕಲ್ಲಣ್ಣವರ ಅವರೊಂದಿಗೆ ಸೆ.25ರಂದು ಕಾರ್ಯಾಚರಣೆ ನಡೆಸಿ ಲಕ್ಷ್ಮೇಶ್ವರದ ಹುಬ್ಬಳ್ಳಿ ರಸ್ತೆಯ ಹೊರವಲಯದಲ್ಲಿ ಸಂಶಯಾಸ್ಪದ ವ್ಯಕ್ತಿಯನ್ನು ಬಂಧಿಸಿ ಠಾಣೆ ಕರೆದೊಯ್ದು ವಿಚಾರಣೆ ನಡೆಸಿದಾಗ ಲಕ್ಷ್ಮೇಶ್ವರ, ಶಿಗ್ಲಿ, ಕೊಕ್ಕರಗುಂದಿ, ಗದಗ ನಗರದಲ್ಲಿ ಮನೆಕಳ್ಳತನ ಮಾಡಿದ್ದನ್ನು ಒಪ್ಪಿಕೊಂಡಿದ್ದಾನೆ.
ಬಂಧಿತನಿಂದ 7 ಲಕ್ಷ 65 ಸಾವಿರ ರೂ. ಮೌಲ್ಯದ 153 ಗ್ರಾಮ ಚಿನ್ನಾಭರಣ, ಹಾಗೂ ಬೈಕ್ ಜಪ್ತಿ ಮಾಡಲಾಗಿದೆ.
ಕಳ್ಳತನ ಪ್ರಕರಣ ಭೇದಿಸುವಲ್ಲಿ ನೆರವಾದ ಎಎಸ್ ಐಗಳಾದ ವಾಯ್ ಎಸ್ ಕೂಬಿಹಾಳ, ಎಸ್ ಎಚ್ ಬೆಟಗೇರಿ, ಜಿ ಎಂ ಬೂದಿಹಾಳ, ಆರ್ ಎಸ್ ನಿಂಗೋಜಿ, ಸಿಬ್ಬಂದಿಗಳಾದ ಎ ಪಿ ದೊಡ್ಡಮನಿ, ಎನ್ ಡಿ ಹುಬ್ಬಳ್ಳಿ, ಆರ್ ಎಸ್ ಯರಗಟ್ಟಿ, ಪಿ ಡಿ ಮ್ಯಾಗೇರಿ, ಎಚ್ ಬಿ ಗುಡ್ಡಣ್ಣವರ, ಡಿ ಎಸ್ ನದಾಫ್, ಬಿ ಎಸ್ ಮಠಪತಿ, ಎ ಆರ್ ಕಮ್ಮಾರ, ಎಂ ಎಸ್ ಬಳ್ಳಾರಿ, ಎಸ್ ಎಫ್ ತಡಸಿ, ಎಸ್ ಬಿ ಹಸವಿಮಠ, ರಾಮು ನಾಯಕ, ಕೆ ಬಿ ಹುಲಗೂರು, ಮಹಾದೇವ ಲಮಾಣಿಗೆ ಎಸ್ಪಿ ಯತೀಶ್ ಎನ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.