ವಿಜಯಸಾಕ್ಷಿ ಸುದ್ದಿ, ಗದಗ
Advertisement
ಗದಗ ಜಿಲ್ಲೆಯ ಗಜೇಂದ್ರಗಡ ಠಾಣೆ ಪೊಲೀಸರು ಜಮೀನೊಂದರ ಮೇಲೆ ದಾಳಿ ನಡೆಸಿ 950 ಗ್ರಾಂ ತೂಕದ ಗಾಂಜಾ ಗಿಡಗಳನ್ನು ವಶಕ್ಕೆ ಪಡೆದು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ತಾಲೂಕಿನ ಗುಡ್ಡೇದಬೈರಾಪುರ ತಾಂಡಾದ ಶರಣಪ್ಪ ಶಿವಪ್ಪ ಅಜ್ಮೀರ ಬಂಧಿತ ಆರೋಪಿ.
ಶಿವಪ್ಪ ರಾಮಜಪ್ಪ ಅಜ್ಮೀರ ಎಂಬುವವರ ಹೆಸರಿನಲ್ಲಿದ್ದ ಜಾಮೀನಿನಲ್ಲಿ ಶರಣಪ್ಪ ಗಾಂಜಾ ಗಿಡ ಬೆಳೆಸಿ ಗಾಂಜಾ ಮಾರಾಟ ಮಾಡುತ್ತಿದ್ದ.
ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಗಜೇಂದ್ರಗಡ ಠಾಣೆ ಪಿಎಸ್ ಐ ಗುರುಶಾಂತ ದಾಸ್ಯಾಳ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು, 4 ದೊಡ್ಡ ಹಾಗೂ 12 ಚಿಕ್ಕ ಗಾಂಜಾ ಗಿಡಗಳನ್ನು ವಶಕ್ಕೆ ಪಡೆದಿದು ಆರೋಪಿಯನ್ನು ಬಂಧಿಸಿದ್ದಾರೆ. ಪ್ರಕರಣ ಗಜೇಂದ್ರಗಡ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.