ವಿಜಯಸಾಕ್ಷಿ ಸುದ್ದಿ, ಗದಗ
ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಗಜೇಂದ್ರಗಡ ಪೊಲೀಸರು ದಾಳಿ ಮಾಡಿ ಇಸ್ಪೀಟು ಜೂಜಾಟದಲ್ಲಿ ತೊಡಗಿದ್ದ 12 ಜನರನ್ನು ಬಂಧಿಸಿ, ಅವರಿಂದ ಸುಮಾರು 10 ಸಾವಿರ ರೂ.ಗಳನ್ನು ವಶಪಡಿಸಿಕೊಂಡಿದ್ದಾರೆ.
ಜಿಲ್ಲೆಯ ಗಜೇಂದ್ರಗಡದ ಕಾಲಕಾಲೇಶ್ವರ ರಸ್ತೆಯ ಸರಕಾರಿ ನೀರು ಪೂರೈಕೆಯ ಪಂಪ್ ಹೌಸ್ ಬಳಿ ಅಂದರ್-ಬಾಹರ್ ಜೂಜಾಟದಲ್ಲಿ ತೊಡಗಿದ್ದ ಗೌಳಿಗಲ್ಲಿಯ ಗಣೇಶ್ ವಿಠ್ಠಲರಾವ್ ಬೊಹಿಟೆ, ಆನಂದ ವಿಠ್ಠಲರಾವ್ ಬೊಹಿಟೆ, ಫಾರೂಕ್ ಇಬ್ರಾಹಿಂಸಾಬ್ ಹುನಗುಂದ, ಬಸವರಾಜ್ ದ್ಯಾಮಣ್ಣ ವದೇಗೋಳ,
ಕುಷ್ಟಗಿಯ ಚನ್ನಪ್ಪ ಅಂದೆನಪ್ಪ ದಂಡಾವತಿ, ತಾಂಡಾದ ಕುಮಾರ್ ಜಂಪಲೆಪ್ಪ ರಾಠೋಡ ಎಂಬುವವರನ್ನು ಬಂಧಿಸಿ ಅವರಿಂದ 5600 ರೂ. ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಇನ್ನೊಂದು ಪ್ರಕರಣದಲ್ಲಿ ಬೇವಿನಕಟ್ಟಿ ಸಮೀಪದ ಸರಕಾರಿ ಹಳ್ಳದಲ್ಲಿ ಜೂಜಾಟದಲ್ಲಿ ತೊಡಗಿದ್ದ ಬೇವಿನಕಟ್ಟಿ ಗ್ರಾಮದ ವೀರಯ್ಯ ಬಸಯ್ಯ ಕಾರಡಗಿ, ನಬಿಸಾಬ್ ಹುಸೇನಸಾಬ್ ನದಾಫ್, ಮುತ್ತಪ್ಪ ಅಡಿವೆಪ್ಪ ಆಡಿನ, ಶ್ರೀಶೈಲಪ್ಪ ಜಗದೀಶ್ ಅವ್ವಣ್ಣವರ್, ಬಸಯ್ಯ ಚನ್ನಯ್ಯ ಕಾರಡಗಿ, ಮುನೇಶ್ ಶಿವಬಸಪ್ಪ ಆಡಿನ ಎಂಬುವವರನ್ನು ಬಂಧಿಸಲಾಗಿದೆ. ಬಂಧಿತರಿಂದ 4600 ನಗದನ್ನು ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ಗಜೇಂದ್ರಗಡ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿದೆ.