ಪ್ರತ್ಯೇಕ ಜೂಜಾಟ; ಒಂದೇ ಗ್ರಾಮದಲ್ಲಿ 19 ಜನರ ಬಂಧನ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ

Advertisement

ಒಂದೇ ಗ್ರಾಮದಲ್ಲಿ ಎರಡು ಜೂಜಾಟ ಪ್ರಕರಣವನ್ನು ಪತ್ತೆ ಹಚ್ಚಿರುವ ಗ್ರಾಮೀಣ ಪೊಲೀಸರು ಒಟ್ಟು 19 ಜನರನ್ನು ಬಂಧಿಸಿ, ಅವರಿಂದ 23 ಸಾವಿರದ 750 ರೂಪಾಯಿ ವಶಪಡಿಸಿಕೊಂಡಿದ್ದಾರೆ.

ಗದಗ ತಾಲೂಕಿನ ಅಂತೂರ- ಬೆಂತೂರ ಗ್ರಾಮದಲ್ಲಿ ನಡೆದ ಎರಡು ಪ್ರತ್ಯೇಕ ಜೂಜಾಟದ ಪ್ರಕರಣಗಳಲ್ಲಿ ಗ್ರಾಮೀಣ ಠಾಣೆಯ ಪಿಎಸ್ಐ ಅಜಿತಕುಮಾರ್ ಹೊಸಮನಿ ಹಾಗೂ ಸಿಬ್ಬಂದಿ ದಾಳಿ ಮಾಡಿ ಜೂಜಾಟದಲ್ಲಿ ತೊಡಗಿದ್ದ 19 ಜನರನ್ನು ಬಂಧಿಸಿದ್ದಾರೆ.

ಮೊದಲನೇ ಪ್ರಕರಣದಲ್ಲಿ ಅಂತೂರ‌ ಗ್ರಾಮದ ಹಾಲಿನ ಕೇಂದ್ರದ ಬಳಿ ಜೂಜಾಟದಲ್ಲಿ ತೊಡಗಿದ್ದ ಅಲ್ಲಾಭಕ್ಷಿ ಖಾದರಸಾಬ್ ನದಾಫ್, ಹನಮಂತಪ್ಪ ವೀರಭದ್ರಪ್ಪ ಕುಂಬಾರ, ನಿಜಾಮ್ ಸಾಬ್ ಮಹ್ಮದಸಾಬ್ ಹುಡೇದ, ಕುಮಾರ್ ಹನಮಂತಪ್ಪ ಹುಡೇದ, ಗಂಗಾಧರಯ್ಯ ಶಿವಯ್ಯ ನೀಲಗುಂದಮಠ, ಹನಮಂತಪ್ಪ ಅಡಿವೆಪ್ಪ ಅಂಗಡಿ, ಹನಮಂತಪ್ಪ ಶೆಟ್ಟಪ್ಪ ಪೂಜಾರ ಹಾಗೂ ನಾಗರಾಜ ವೀರಪ್ಪ ಮದ್ನೂರು ಎಂಬುವವರನ್ನು ಬಂಧಿಸಿ ಅವರಿಂದ 14,300 ಹಣವನ್ನು ವಶಪಡಿಸಿಕೊಳ್ಳಲಾಗಿದೆ.

ಬೆಂತೂರ ಗ್ರಾಮದ ವಾಲ್ಮೀಕಿ ಭವನದ ಬಳಿ ಇಸ್ಪೀಟು ಎಲೆಗಳ ಸಹಾಯದಿಂದ ಅಂದರ್-ಬಾಹರ್ ಜೂಜಾಟದಲ್ಲಿ ತೊಡಗಿದ್ದ ಅರ್ಜುನ ಉಡಚಪ್ಪ ಹಡಗಲಿ, ಬೂದಪ್ಪ ಮಹಾದೇವಪ್ಪ ಜಿನಗಿ, ಯಲ್ಲಪ್ಪ ಉಡಚಪ್ಪ ಹಡಗಲಿ, ರಾಚಪ್ಪ ಮಹಾದೇವಪ್ಪ ಬಡ್ನಿ, ಹನಮಂತಪ್ಪ ಲಕ್ಷ್ಮಪ್ಪ ವಾಲ್ಮೀಕಿ, ಹನಮಪ್ಪ ಭೀಮಪ್ಪ ಬಡ್ನಿ, ಫಕ್ಕೀರೇಶ್ ಸಣ್ಣ ಲಕ್ಷ್ಮಪ್ಪ ಸಂದಿಮನಿ, ಬೂದಪ್ಪ ನೀಲಪ್ಪ‌ ಬಾರಕೇರ, ಮಂಜುನಾಥ್ ಬೂದಪ್ಪ ಪೂಜಾರ, ವೆಂಕಟೇಶ ರಾಮಪ್ಪ ಮಜ್ಜೆಗುಡ್ಡ, ಚನ್ನಬಸಪ್ಪ ಪೀರಪ್ಪ ಹರ್ತಿ ಎಂಬುವವರನ್ನು ಬಂಧಿಸಿ ಅವರಿಂದ 9,450 ರೂಪಾಯಿಗಳನ್ನು ವಶಪಡಿಸಿಕೊಳ್ಳಲಾಗಿದೆ.

ಈ ಕುರಿತು ಗದಗ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

LEAVE A REPLY

Please enter your comment!
Please enter your name here