ಪ್ರತ್ಯೇಕ ನಿಗಮ ಸ್ಥಾಪಿಸಿ, 100 ಕೋಟಿ ಅನುದಾನ ನೀಡಿ; ಜಿಲ್ಲಾಧ್ಯಕ್ಷ ಎಸ್. ಕೆ. ನದಾಫ್

0
Spread the love

ಸುದ್ದಿಗೋಷ್ಠಿಯಲ್ಲಿ ರಾಜ್ಯ ನದಾಫ್ ಹಾಗೂ ಪಿಂಜಾರ ಸಮಾಜದ ಜಿಲ್ಲಾಧ್ಯಕ್ಷ ಎಸ್.ಕೆ.ನದಾಫ್ ಒತ್ತಾಯ

Advertisement

ವಿಜಯಸಾಕ್ಷಿ ಸುದ್ದಿ, ಗದಗ:

ಪ್ರಸಕ್ತ ಸಾಲಿನ ಆಯವ್ಯಯ ಮಂಡನೆ ವೇಳೆ ನದಾಫ್ ಹಾಗೂ ಪಿಂಜಾರ ಸಮಾಜಕ್ಕೆ ಪ್ರತ್ಯೇಕ ನಿಗಮ ಮಂಡಳಿ ಸ್ಥಾಪಿಸಿ, 50-100 ಕೋಟಿ ರೂ. ಅನುದಾನ ಮೀಸಲಿಡಬೇಕು ಎಂದು ಆಗ್ರಹಿಸಿ ಫೆ.10ರಂದು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ರಾಜ್ಯ ನದಾಫ್ ಹಾಗೂ ಪಿಂಜಾರ ಸಮಾಜದ ಜಿಲ್ಲಾಧ್ಯಕ್ಷ ಎಸ್.ಕೆ.ನದಾಫ್ ತಿಳಿಸಿದರು.

ಮಂಗಳವಾರ ನಗರದ ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿರುವ ನದಾಫ್ ಹಾಗೂ ಪಿಂಜಾರ್ ಜನಾಂಗಕ್ಕೆ ಸೇರಿದ ನಾವುಗಳು ಶೋಷಿತ ಹಾಗೂ ಬಡತನದಲ್ಲಿ ಜೀವನ ಸಾಗಿಸುತ್ತಿದ್ದೇವೆ. ರಾಜ್ಯದಲ್ಲಿ 25-30 ಲಕ್ಷ ಜನಸಂಖ್ಯೆ ಇದ್ದು, ಶೈಕ್ಷಣಿಕ, ಸಾಮಾಜಿಕ, ರಾಜಕೀಯವಾಗಿ ಅತ್ಯಂತ ಹಿಂದುಳಿದಿದ್ದೇವೆ. ಹೀಗಾಗಿ ನಮ್ಮ ಸಮುದಾಯಕ್ಕೆ ಪ್ರತ್ಯೇಕ ನಿಗಮ ಸ್ಥಾಪಿಸಬೇಕೆಂದು ಒತ್ತಾಯಿಸಿದರು.

ನದಾಫ್ ಹಾಗೂ ಪಿಂಜಾರ ಸಮಾಜದವರು ಅರಳೆ ಹತ್ತಿಯ ಮೂಟೆಗಳನ್ನು ಸೈಕಲ್‌ಗಳ ಮೇಲೆ ಹೇರಿಕೊಂಡು ಬೀದಿ ಬೀದಿ ಸುತ್ತುವುದು, ಅನಿರ್ದಿಷ್ಟ ಸ್ಥಳ ಮತ್ತು ಕಾಲಗಳಲ್ಲಿ ಸಂಚರಿಸಿ ಜೀವನ ಸಾಗಿಸುತ್ತಿದ್ದಾರೆ. ದೂರದ ಪರ ಊರುಗಳಿಂದ ಅರೆ ಅಲೆಮಾರಿ ವೃತ್ತಿಪರರು ಅಪರಿಚಿತ ಸ್ಥಳ, ಹಾಳು ಮಂಟಪ, ಊರ ಬಯಲು, ದೇವಸ್ಥಾನ, ಮಸೀದಿಗಳ ಆವರಣದಲ್ಲಿ ಅತ್ಯಂತ ದಯನೀಯ ಸ್ಥಿತಿಯಲ್ಲಿ ರಾತ್ರಿಗಳನ್ನು ಕಳೆಯಬೇಕಾಗಿದೆ.

ರಾಜ್ಯದಲ್ಲಿ ಅಲೆಮಾರಿ ಎಂದು ಗುರುತಿಸಿರುವ ಈ ಸಮುದಾಯದ ಜನರಿಗೆ ಸದ್ಯ ಪ್ರವರ್ಗ-1 ಮೀಸಲಾತಿ ಸೌಲಭ್ಯ ನೀಡಲು ಅವಕಾಶ ಇದ್ದರೂ ಕೆಲವು ಜಿಲ್ಲೆಯಲ್ಲಿ ಇದನ್ನು ಸಹಿತ ನೀಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಎಸ್.ಎ.ಟೋಪಿವಾಲ್, ಎ.ಎನ್. ನದಾಫ, ಗದಗ-ಬೆಟಗೇರಿ ನಗರಸಭೆ ಸದಸ್ಯ ಮೆಹಬೂಬ ನದಾಫ್, ರಮಜಾನಸಾಬ ನದಾಫ್, ಆರ್.ವೈ. ನದಾಫ್, ಮೌಲಾಸಾಬ ಸಿದ್ಧಾಪುರ, ಮೈನುದ್ದಿನ್ ಬಿಜಾಪೂರ ಉಪಸ್ಥಿತರಿದ್ದರು.


Spread the love

LEAVE A REPLY

Please enter your comment!
Please enter your name here