ವಿಜಯಸಾಕ್ಷಿ ಸುದ್ದಿ, ಹೂವಿನಹಡಗಲಿ
ಕರ್ನಾಟಕ ಪ್ರೆಸ್ ಕ್ಲಬ್ ತಾಲೂಕು ಘಟಕದ ಸಾಮಾನ್ಯ ಸಭೆಯಲ್ಲಿ 2021- 22ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಅದ್ಯಕ್ಷರಾಗಿ ವಿಜಯ ಕರ್ನಾಟಕ ಪತ್ರಿಕೆ ವರದಿಗಾರ ಪಿ. ವೀರಣ್ಣ,
ಉಪಾಧ್ಯಕ್ಷರಾಗಿ ಕನ್ನಡನಾಡು ಪತ್ರಿಕೆ ವರದಿಗಾರ ಎಸ್. ಅಶ್ವತ್ಥನಾರಾಯಣ್,

ಪ್ರಧಾನ ಕಾರ್ಯದರ್ಶಿಯಾಗಿ ವಿಜಯವಾಣಿ ಪತ್ರಿಕೆಯ ವರದಿಗಾರ ಶಿವಕುಮಾರ ಪತ್ರಿಮಠದ,

ಖಜಾಂಚಿಯಾಗಿ ನವೋದಯ ಪತ್ರಿಕೆ ವರದಿಗಾರ ಎಸ್.ಎಂ. ಬಸವರಾಜ್,

ಸಹ ಕಾರ್ಯದರ್ಶಿಯಾಗಿ ಮೂಡಣ ಪತ್ರಿಕೆ ವರದಿಗಾರ ಎಸ್.ಎಂ. ಜಾನ್ ಆಯ್ಕೆ ಯಾದರು.

ಕಾರ್ಯಕಾರಿ ಸಮಿತಿ ಸದಸ್ಯರಾಗಿ ಕೆ.ಅಯ್ಯನಗೌಡ, ವಿಶ್ವನಾಥ ಹಳ್ಳಿಗುಡಿ, ಎಂ. ನಿಂಗಪ್ಪ, ಎಂ.ಪಿ.ಎಂ. ಶಿವಪ್ರಕಾಶ್, ಎಸ್.ನಿಂಗರಾಜ, ಚಂದ್ರು ಕೊಂಚಿಗೇರಿ, ಎಂ.ಅಶೋಕ, ಎಚ್.ಎಂ. ಗುರುಬಸವರಾಜಯ್ಯ, ಎಲ್.ಅಕ್ಬರ್, ಸೋಮಶೇಖರ, ಎಚ್.ಚಂದ್ರಪ್ಪ, ಕೆ. ಎಚ್.ಕೆ. ಮಹೇಶ, ಎಚ್.ವೀರನಗೌಡ ಸರ್ವಾನುಮತದಿಂದ ಆಯ್ಕೆಯಾದರು.