
ವಿಜಯಸಾಕ್ಷಿ ಸುದ್ದಿ, ಕೊಪ್ಪಳ
ನಗರದ ಎಫ್-9 ಬನ್ನಿಕಟ್ಟಿ ಫೀಡರ್‌ಗೆ ಒಳಪಡುವ ಏರಿಯಾಗಳಲ್ಲಿ ವಿದ್ಯುತ್ ಕಾಮಗಾರಿಗಳ ತುರ್ತು ಕೆಲಸ ನಡೆಯುತ್ತಿರುವ ಹಿನ್ನಲೆ ಜು. 07 ರಂದು ಬೆಳಿಗ್ಗೆ 09 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ನಗರದ ವಿವಿಧೆಡೆ ವಿದ್ಯುತ್ ವ್ಯತ್ಯಯವಾಗಲಿದೆ.
ಬನ್ನಿಕಟ್ಟಿ ಫೀಡರ್‌ಗೆ ಒಳಪಡುವ ತಾಲ್ಲೂಕ ಪಂಚಾಯತ್ ಕಾಂಪ್ಲೆಕ್ಸ್, ಅಶೋಕ್ ಸರ್ಕಲ್, ಜವಾಹರ ರಸ್ತೆ, ದಿವಟರ್ ಸರ್ಕಲ್, ಕೊಪ್ಪಳ ಪೊಲೀಸ್ ಠಾಣೆ, ಪದಕಿ ಲೇಔಟ್, ಟ್ರಿನಿಟಿ ಶಾಲೆ ಸುತ್ತ-ಮುತ್ತಲಿನ ಪ್ರದೇಶಗಳಲ್ಲಿ ಜು. 07 ರಂದು ಬೆಳಿಗ್ಗೆ 09 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ದುರಸ್ತಿ ಕಾಮಗಾರಿ ಮುಗಿದ ಯಾವುದೇ ಸಮಯದಲ್ಲಿ ವಿದ್ಯುತ್ ಸರಬರಾಜು ಮಾಡಲಾಗುವುದು. ಆದ್ದರಿಂದ ಗ್ರಾಹಕರು ಯಾವುದೇ ವಿದ್ಯುತ್ ದುರಸ್ಥಿ ಕಾರ್ಯಗಳಲ್ಲಿ ತೊಡಗದೆ ಸಹಕರಿಸಬೇಕು. ಒಂದು ವೇಳೆ ವಿದ್ಯುತ್ ಅವಘಡ ಸಂಭವಿಸಿದಲ್ಲಿ ಕಂಪನಿಯು ಜವಾಬ್ದಾರಿಯಾಗಿರುವುದಿಲ್ಲ ಎಂದು ಜೆಸ್ಕಾಂ ಕೊಪ್ಪಳ ಕಾರ್ಯ ಮತ್ತು ಪಾಲನಾ ಉಪ-ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು(ವಿ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.