ವಿಜಯಸಾಕ್ಷಿ ಸುದ್ದಿ, ಬೆಂಗಳೂರು
- ಬಿಜೆಪಿಯಲ್ಲಿ ತಲ್ಲಣ ಸೃಷ್ಟಿಸಿದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರದ್ದೆನ್ನಲಾದ
ಆಡಿಯೋ!
ವಿಜಯಸಾಕ್ಷಿ ಸುದ್ದಿ, ಬೆಂಗಳೂರು
ಮುಖ್ಯಮಂತ್ರಿ ಹುದ್ದೆಯಿಂದ ಬಿಎಸ್ ವೈ ಕೆಳಗಿಳಿಯುವುದು ನಿಶ್ಚಿತ, ಜೊತೆಗೆ ಜಗದೀಶ್ ಶೆಟ್ಟರ್, ಈಶ್ವರಪ್ಪ ಅವರನ್ನು ಸಹ ಹೊರಗಿಡಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ ಕಟೀಲ್ ಮಾತನಾಡಿದ್ದಾರೆನ್ನಲಾದ ಆಡಿಯೋ ಬಹಿರಂಗವಾಗಿದ್ದು, ರಾಜ್ಯ ರಾಜಕೀಯದಲ್ಲಿ ತಲ್ಲಣ ಸೃಷ್ಟಿಸಿದೆ.
ಅಪ್ತರ ಬಳಿ ತುಳು ಭಾಷೆಯಲ್ಲಿ ಮಾತುಕತೆ ನಡೆಸಿರುವ ಕಟೀಲ್, ಯಡಿಯೂರಪ್ಪ ಅವರ ಜಾಗಕ್ಕೆ ಮೂವರ ಪೈಕಿ ಒಬ್ಬರು ಬರಲಿದ್ದಾರೆ ಅವರೂ ನಮ್ಮವರೇ ಆಗಲಿದ್ದಾರೆ ಎಂದೂ ಹೇಳಿದ್ದಾರೆ.
ಯಾರಿಗೂ ಹೇಳಬೇಡ, ಶೆಟ್ಟರ್, ಈಶ್ವರಪ್ಪ ಮತ್ತವರ ಟೀಮ್ ಹೊರಬೀಳಲಿದ್ದು, ಬಳಿಕ ನಾವು ಹೇಳಿದಂತೆಯೇ ಎಲ್ಲ ನಡೆಯಲಿದೆ.
ಇದು ನಳಿನ್ ಕುಮಾರ ಕಟೀಲು ಅವರ ಧ್ವನಿಯೇ ಎನ್ನುವುದು ಖಚಿತವಾಗಬೇಕಿದೆ.
ತನಿಖೆ ನಡೆಯಲಿ: ಕಟೀಲ್
ಆಡಿಯೋ ಬಗ್ಗೆ ತನಿಖೆ ನಡೆಸುವಂತೆ ಮುಖ್ಯಮಂತ್ರಿಗಳಿಗೆ ಪತ್ರ ಬರೆಯುತ್ತೇನೆ. ನನ್ನ ಹಂತದಲ್ಲಿ ಸಿಎಂ ಬದಲಾವಣೆ ಚರ್ಚೆಯೇ ಇಲ್ಲ ಎಂದು ನಳಿನ್ ಕುಮಾರ ಕಟೀಲ್ ಪ್ರತಿಕ್ರಿಯಿಸಿದ್ದಾರೆ.