ವಿಜಯಸಾಕ್ಷಿ ಸುದ್ದಿ, ಬೆಂಗಳೂರು
ಬಿಗ್ ಬಾಸ್ ನ 62ನೇ ದಿನದಲ್ಲಿ ಎಲಿಮೇಷನ್ ಇಲ್ಲದೆಯೇ ಮನೆಯಿಂದ ದಿವ್ಯಾ ಉರುಡುಗ ಹೊರ ಬಂದಿದ್ದಾರೆ. ದಿವ್ಯ ಉರುಡುಗಗೆ ಅನಾರೋಗ್ಯದ ಕಾರಣದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದು, ಸದ್ಯ ಮನೆ ತೊರೆದಿದ್ದಾರೆ. ಈ ವಿಷಯ ಕೇಳಿದ ಅರವಿಂದ್ ಕಣ್ಣೀರು ಹಾಕಿದ್ದಾರೆ.
ದಿವ್ಯ ಉರುಡುಗ ಅವರ ಆರೋಗ್ಯದಲ್ಲಿ ಏರುಪೇರಾದ ಕಾರಣ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರ ಬಟ್ಟೆಗಳನ್ನು ತಂದು ಸ್ಟೋರ್ ರೂಮಿಗೆ ಇರಿಸಿ ಈ ಕೂಡಲೇ ಎಂದು ಬಿಗ್ ಬಾಸ್ ಆದೇಶಿಸಿದ್ದಾರೆ. ಈ ಆದೇಶವನ್ನು ಕೇಳಿದ ಅರವಿಂದ್, ಹೋದರೆ ಅವಳು ಇನ್ನು ಬರುವುದಿಲ್ಲ ಎಂದು ಹೇಳಿ ಗಳಗಳನೆ ಅತ್ತಿದ್ದಾರೆ.
ದಿನ ಬೆಳಿಗ್ಗೆ ಎದ್ದು ರಾತ್ರಿ ತನಕ ನನ್ನ ಜೊತೆ ಅವಳು ಇರುತ್ತಿದ್ದಳು. ನಿಮ್ಮ ಜೊತೆ ಗಲಾಟೆಯಾದರೂ ಅಥವಾ ಖುಷಿಯಾದರೂ ನನ್ನ ಜೊತೆಯೇ ಇರುತ್ತಿದ್ದಳು. ಈಗ ಎಲ್ಲ ಹೋಯಿತು ಎಂದು ಭಾವುಕರಾಗಿ ಕಣ್ಣೀರು ಹಾಕಿದ್ದಾರೆ.
ನಿನ್ನೆ ಲೀವಿಂಗ್ ಏರಿಯಾದಲ್ಲಿ ಸದಸ್ಯರು ಕುಳಿತಿದ್ದ ಸಂದರ್ಭದಲ್ಲಿ ದಿವ್ಯಾ ಅವರಿಗೆ ಸ್ಕ್ಯಾನಿಂಗ್ ಮಾಡಿಸಬೇಕೆಂದು ವೈದ್ಯರು ಸೂಚಿಸಿದ್ದರಿಂದ ಅವರನ್ನು ತಪಾಸಣೆಗೆ ಕರೆದೊಯ್ಯಲಾಗಿದೆ. ಅವರು ಕ್ಷೇಮವಾಗಿದ್ದಾರೆ ಎಂದು ಆರಂಭದಲ್ಲಿ ಬಿಗ್ ಬಾಸ್ ಮನೆ ಮಂದಿಗೆ ತಿಳಿಸಿದ್ದರು. ಇದನ್ನು ಹೇಳುತ್ತಿದ್ದಂತೆ ಅರವಿಂದ್ ಸ್ವಲ್ಪ ಭಾವುಕರಾಗಿದ್ದರು. ದಿವ್ಯಾ ಉರುಡುಗ ಮತ್ತೆ ಬಿಗ್ ಬಾಸ್ ಮನೆಗೆ ಬರುವುದು ಬಹುತೇಕ ಅನುಮಾನ ಎನ್ನಲಾಗುತ್ತಿದೆ.