ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ನಡೆದ ಚುನಾವಣೆಯಲ್ಲಿ 33 ನೇ ವಾರ್ಡ್‌ನ ಫಲಿತಾಂಶ ಪ್ರಕಟಗೊಂಡಿದ್ದು, ಬಿಜೆಪಿ ಭದ್ರಕೋಟಿ ಛಿದ್ರಗೊಂಡಿದ್ದು, ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಭರ್ಜರಿ ಗೆಲುವು ಸಾಧಿಸಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಇಮಾಮಹುಸೇನ ಯಲಿಗಾರ 4925 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಎದುರಾಳಿ ಬಿಜೆಪಿ ಅಭ್ಯರ್ಥಿ ಮುರಿಗೆಪ್ಪ ಹೊರಡಿ 1778 ಮತಗಳನ್ನು ಪಡೆದು ಪರಾಜಿತಗೊಂಡಿದ್ದಾರೆ.
ಪಕ್ಷೇತರ ಅಭ್ಯರ್ಥಿ ನಾರಾಯಣ ಪರಶುರಾಮ ಸೋಳಂಕೆ 412 ಮತಗಳನ್ನು ಪಡೆದು ಮೂರನೇ ಸ್ಥಾನಕ್ಕೆ ತೃಪ್ತಿಗೊಂಡಿದ್ದಾರೆ.

ಆಪ್ ಅಭ್ಯರ್ಥಿ 153 ಮತಗಳನ್ನು ಪಡೆದರೆ, ಜೆಡಿಎಸ್ ಅಭ್ಯರ್ಥಿ ಬಾಷಾಸಾಬ್ ಅಲ್ಲಾಬಕ್ಷ ಮುದಗಲ್ 102 ಮತಗಳನ್ನು ಪಡೆದಿದ್ದಾರೆ. ಪಕ್ಷೇತರ ಅಭ್ಯರ್ಥಿಗಳಾದ ರಾಮಚಂದ್ರ ಕಾನಪೇಟ 69 ಮತ, ಅಶೋಕ ಅಸೂಟಿ 60 ಮತ, ಮಂಜುನಾಥ ಹ ಭಜಂತ್ರಿ 37, ಫೈರೋಜ ಅಹ್ಮದ್ ಧಾರವಾಡ 19 ಮತಗಳನ್ನು ಪಡೆದಿದ್ದಾರೆ.

ಒಟ್ಟು 7619 ಮತಗಳು ಚಲಾವಣೆಯಗಿದ್ದು 67 ಮತಗಳು ನೋಟಾ ಅಗಿವೆ. 7552 ಮತಗಳು ಸಿಂಧು ಆಗಿವೆ.
ಕಾಂಗ್ರೆಸ್ ಅಭ್ಯರ್ಥಿ ಇಮಾಮ್ ಹುಸೇನ್ ಯಲಿಗಾರ ಗೆಲುವು ಸಾಧಿಸುತ್ತಿದ್ದಂತೆಯೇ ಕಾರ್ಯಕರ್ತರು ಸಂಭ್ರಮಪಟ್ಟರು.