ಬಿಜೆಪಿ ಶಾಸಕರ ಸೆಳೆಯಲು ಡಿಕೆಶಿ ಯತ್ನ; ಬಿಎಸ್ವೈ ಹೊಸ ಬಾಂಬ್

0
Spread the love

ವಿಜಯಸಾಕ್ಷಿ ಸುದ್ದಿ, ದಾವಣಗೆರೆ

Advertisement

ಬಿಜೆಪಿಯ ಶಾಸಕರನ್ನು ಸಂಪರ್ಕಿಸಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಸರತ್ತು ನಡೆಸಿದ್ದಾರೆ. ಈಗಾಗಲೆ ಒಂದಿಬ್ಬರು ಶಾಸಕರನ್ನು ಸಂಪರ್ಕಿಸಿದ್ದಾರೆ ಎಂದು‌ ಮಾಜಿ ಬಿಎಸ್ ವೈ ಹೊಸ ಬಾಂಬ್ ಸಿಡಿಸಿದ್ದಾರೆ.

ದಾವಣಗೆರೆಯಲ್ಲಿ ರಾಜ್ಯ ಕಾರ್ಯಕಾರಿಣಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ವಿಪಕ್ಷಗಳನ್ನ ಹಗುರವಾಗಿ ಪರಿಗಣನೆ ಮಾಡಬೇಡಿ. ವಿಪಕ್ಷಗಳು ರಾಜ್ಯದಲ್ಲಿ ತಮ್ಮದೆ ಆದ ಶಕ್ತಿ ಹೊಂದಿವೆ. ನನ್ನ ಕಿವಿಮಾತನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಿದೆ. ಶಕ್ತಿ ಮೀರಿ ಮುಂದಿನ ಚುನಾವಣೆ ಎದುರಿಸಬೇಕು ಎಂದರು.

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಬಲಿಷ್ಠವಾಗಿದೆ, ಎದ್ದು ಕೂತಿದೆ. ಲೋಕಸಭೆ ಚುನಾವಣೆಯನ್ನು ಪ್ರಧಾನಿ ಮೋದಿಯವರ ಹೆಸರಿನಲ್ಲಿ ಗೆಲ್ಲಬಹುದು. ಆದರೆ, ವಿಧಾನಸಭೆ ಗೆಲ್ಲುವುದು ಸುಲಭವಲ್ಲ. ತಳ ಮಟ್ಟದಲ್ಲಿ ನಾವು ಪಕ್ಷ ಸಂಘಟನೆ ಬಲಪಡಿಸಬೇಕು.

ಯಾರ ಮೇಲೂ ಅವಲಂಬನೆಯಾಗದೆ 140 ಸ್ಥಾನ ಗೆದ್ದು ಅಧಿಕಾರ ಹಿಡಿಯಬೇಕಿದೆ. ಇದಕ್ಕಾಗಿ ಎಲ್ಲರೂ ಒಗ್ಗೂಡಿ ಕೆಲಸ ಮಾಡಬೇಕಿದೆ ಎಂದು ಕಿವಿಮಾತು ಹೇಳಿದರು.

ಹಾನಗಲ್ ಮತ್ತು ಸಿಂಧಗಿ ಉಪಚುನಾವಣೆಯನ್ನು ನಾವು ಹಗುರವಾಗಿ ತೆಗೆದುಕೊಳ್ಳಬಾರದು. ಗೆಲ್ಲುವ ತಂತ್ರಗಳನ್ನು ಮಾಡಬೇಕಿದೆ. ವಿಧಾನಪರಿಷತ್ ಚುನಾವಣೆಯಲ್ಲಿ ನಾವು ಹೆಚ್ಚು ಸೀಟು ಗೆಲ್ಲಬೇಕಿದೆ ಎಂದು ಹೇಳಿದರು.

ಪಕ್ಷ ಸಂಘಟನೆ ಹಾಗೂ ಹೋರಾಟದ ಬಗ್ಗೆ ಮೆಲುಕು ಹಾಕಿದ ಮಾಜಿ ಸಿಎಂ, ವಿಧಾನಸಭೆಯಲ್ಲಿ ಎರಡು ಸದಸ್ಯರಿಂದ ಅಧಿಕಾರಕ್ಕೇರುವ ಹಾಗೆ ಮಾಡಿದ್ದೇನೆ. ಮುಂಬರುವ ದಿನಗಳಲ್ಲಿ ಒಂದು ತಿಂಗಳ ಕಾಲ ಪಕ್ಷ ಸಂಘಟನೆ ಮಾಡಲಿದ್ದೇನೆ.

ರಾಜ್ಯದಲ್ಲಿ ಯಡಿಯೂರಪ್ಪ ಪ್ರವಾಸದ ಬಗ್ಗೆ ಚರ್ಚೆ ನಡೆಯುತ್ತಿದೆ. ಯಡಿಯೂರಪ್ಪ ಒಬ್ಬನೇ ಪ್ರವಾಸ ಮಾಡಲ್ಲ. ನಾಲ್ಕಾರು ಗುಂಪುಗಳಲ್ಲಿ ಕೆಲಸ ಮಾಡಬೇಕಿದೆ. ಪ್ರಧಾನಿ ಮೋದಿಯವರ ಅಪೇಕ್ಷೆ ಕೂಡ ಇದೆ ಆಗಿದೆ. ಪ್ರಮಾಣಿಕವಾಗಿ ಎಲ್ಲರೂ ಒಗ್ಗೂಡಿ ಕೆಲಸ ಮಾಡಬೇಕಿದೆ ಎಂದ ಅವರು, ದೇವಸ್ಥಾನವನ್ನು ಕೆಡುವುದನ್ನು ನಿಲ್ಲಿಸಲು ನಮ್ಮ ಸರ್ಕಾರ ಕಠಿಣ ನಿರ್ಧಾರ ಮಾಡಲಾಗಿದೆ ಎಂದು ತಿಳಿಸಿದರು.


Spread the love

LEAVE A REPLY

Please enter your comment!
Please enter your name here