ವಿಜಯಸಾಕ್ಷಿ ಸುದ್ದಿ, ಗದಗ
ಏಳು ಜನರ ತಂಡವೊಂದು ಅಂದರ್-ಬಾಹರ್ ಜೂಜಾಟದಲ್ಲಿ ತೊಡಗಿದ್ದ ವೇಳೆ ಬೆಟಗೇರಿ ಠಾಣೆಯ ಪಿಎಸ್ಐ ರಾಜೇಶ್ ಬಟಕುರ್ಕಿ ಹಾಗೂ ಪೊಲೀಸರು ದಾಳಿ ಮಾಡಿ ಬಂಧಿಸಿದ್ದಾರೆ.
ಬೆಟಗೇರಿಯ ಕನ್ಯಾಳ ಅಗಸಿ ರಸ್ತೆಯ ಅಂಬೇಡ್ಕರ್ ನಗರಕ್ಕೆ ಹೋಗುವ ಮಾರ್ಗದಲ್ಲಿ ಜೂಜಾಟದಲ್ಲಿ ತೊಡಗಿದ್ದ ಸೋಹೆಲ್ ಮಾಬುಸಾಬ ನರಗುಂದ, ಪ್ರಕಾಶ ಮಲಕಾಜಪ್ಪ ರೊಟ್ಟಿ, ಕೃಷ್ಣಪ್ಪ ರಾಮಪ್ಪ ಚಲವಾದಿ, ವೀರಪ್ಪ ರಾಮಪ್ಪ ಮಸ್ಕಿ, ಅಂಬಾದಾಸ ಮಹಾದೇವಪ್ಪ ಜಾದವ್, ಮುತ್ತಪ್ಪ ಕೊಟ್ರಪ್ಪ ಮುಳ್ಳಾಳ ಹಾಗೂ ಸುರೇಶ್ ಮಲ್ಲೇಶಪ್ಪ ಹಳ್ಳಿಕೇರಿ ಎಂಬುವವರನ್ನು ಬಂಧಿಸಿಲಾಗಿದೆ.
ಬಂಧಿತರಿಂದ ನಗದು 13 ಸಾವಿರ ರೂಪಾಯಿಗಳನ್ನು ಜಪ್ತಿ ಮಾಡಲಾಗಿದೆ. ಈ ಕುರಿತು ಬೆಟಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



