ಬೆಡ್ ಸಿಗದೇ ವೃದ್ಧೆಯ ಪರದಾಟ! ಗದಗ ಜಿಮ್ಸ್ ನಲ್ಲಿ ಬೆಡ್ ಕೊರತೆ ?

0
Spread the love

ವಿಜಯಸಾಕ್ಷಿ ಸುದ್ದಿ, ಗದಗ

Advertisement

ಬೆಂಗಳೂರು, ಮುಂಬೈ ಮಹಾನಗರಗಳಲ್ಲಿ ಕೋವಿಡ್ ಸೋಂಕಿತರಿಗೆ ಬೆಡ್ ಸಿಗದೆ ಪರದಾಡುತ್ತಿರುವ ಸಂಗತಿಗಳು ಹೆಚ್ಚುತ್ತಿರುವ ಬೆನ್ನಲ್ಲೆ, ಗದಗ ಜಿಮ್ಸ್ ನಲ್ಲಿಯೂ ಬೆಡ್ ಕೊರತೆ ಇರುವುದು ಸ್ಪಷ್ಟವಾಗುತ್ತಿದೆ.
ಕಾರಣ, ಶುಕ್ರವಾರ ಗದಗನ ಜಿಲ್ಲಾ ಆಸ್ಪತ್ರೆ ಹಿಂಭಾಗದಲ್ಲಿರುವ ಆಯುಷ್ ಆಸ್ಪತ್ರೆಯಲ್ಲಿನ ಕೋವಿಡ್ ಸೆಂಟರ್ ನಲ್ಲಿ ಸೋಂಕಿತ ವೃದ್ಧ ರೋಗಿಯೊಬ್ಬರು ಬೆಡ್ ಗಾಗಿ ಪರದಾಡಿದ್ದಾರೆ.

70 ವರ್ಷದ ವೃದ್ಧೆಯೊಬ್ಬರು ನಿನ್ನೆಯಿಂದ ಜಿಮ್ಸ್ ಪಕ್ಕದ ನಿರ್ಮಾಣ ಹಂತದಲ್ಲಿರುವ ಕಟ್ಟಡದಲ್ಲಿ ಹೆಚ್ಚುವರಿ ಬೆಡ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಶುಕ್ರವಾರ ಬೆಳಗ್ಗೆ ತೀವ್ರ ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ. ತಕ್ಷಣವೇ ವೃದ್ಧೆಗೆ ವೆಂಟಿಲೇಟರ್ ಮೂಲಕ ಚಿಕಿತ್ಸೆ ನೀಡಬೇಕಿತ್ತು. ಹೀಗಾಗಿ ವೈದ್ಯರು ವೃದ್ಧೆಯನ್ನ ಕೋವಿಡ್ ಸೆಂಟರ್ ಗೆ ಶಿಫಾರಸು ಮಾಡಿದರು.
ಆದರೆ ಕೋವಿಡ್ ಸೆಂಟರ್ ನಲ್ಲಿ ಬೆಡ್ ಇಲ್ಲದೇ ಸಿಬ್ಬಂದಿ ಅತ್ತಿಂದಿತ್ತ ಅಲೆದಾಡಿಸಿ ಪರದಾಡುವಂತೆ ಮಾಡಿದರು.

ಇದರಿಂದಾಗಿ ವೃದ್ಧೆಯ ಸಂಬಂಧಿಕರು ಕೋವಿಡ್ ಸೆಂಟರ್ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸಿಬ್ಬಂದಿ ವಿರುದ್ಧ ಹರಿಹಾಯ್ದ ನಂತರ ಕೊನೆಗೂ ಬೆಡ್ ಕಲ್ಪಿಸಿಕೊಟ್ಟು, ಚಿಕಿತ್ಸೆ ಮುಂದುವರಿಸಿದ್ದಾರೆ.

ಕೋವಿಡ್ ನಿರ್ವಹಣೆಯಲ್ಲಿ ರಾಜ್ಯದಲ್ಲಿಯೇ ಮಾದರಿ ಎನಿಸಿಕೊಂಡ ಜಿಲ್ಲೆಯಲ್ಲಿ ಬೆಡ್ ಸಿಗದೆ ವೃದ್ಧೆ ಎರಡು ಗಂಟೆಗೂ ಹೆಚ್ಚು ಪರಿತಪಿಸುವಂತಾಗಿದ್ದು, ವೈದ್ಯಕೀಯ ಸೌಲಭ್ಯದ ಅವ್ಯವಸ್ಥೆಗೆ ಸಾಕ್ಷಿಯಾಗಿದೆ.


Spread the love

LEAVE A REPLY

Please enter your comment!
Please enter your name here