ವಿಜಯಸಾಕ್ಷಿ ಸುದ್ದಿ, ಕೋಲಾರ
ಕೊರೊನಾ ಚೈನ್ ಕಟ್ ಮಾಡುವ ಉದ್ಧೇಶದಿಂದ ರಾಜ್ಯದಲ್ಲಿ ಜಾರಿಗೊಳಿಸಿರುವ ಲಾಕ್ ಡೌನ್ ನಿಂದಾಗಿ ರೈತರ ಬದುಕು ಬೀದಿಗೆ ಬಂದಿದೆ.
ರೈತರ ಬೆಳೆದ ಬೆಳೆಗೆ ಮಾರುಕಟ್ಟೆಯಲ್ಲಿ ಬೆಲೆಯೇ ಇಲ್ಲದಂತಾಗುತ್ತಿದೆ. ಇದರಿಂದಾಗಿ ರೈತರು ಹೈರಾಣಾಗುತ್ತಿದ್ದಾರೆ. ಎಕರೆಗೆ ರೂ. 3 ಲಕ್ಷ ವ್ಯಯಿಸಿ ಬೆಳೆದ ಮೂರು ಲಕ್ಷ ಖರ್ಚು ಮಾಡಿ ಬೆಳೆದ ಬೆಳೆ.
15 ಕೆಜಿ ತೂಕದ ಟೊಮ್ಯಾಟೋ ಇರುವ ಒಂದು ಬಾಕ್ಸ್ ಕೇವ ರೂ. 30ಕ್ಕೆ ಮಾರಾಟವಾಗುತ್ತಿದೆ. ಜಿಲ್ಲೆಯ ಮುಳಬಾಗಿಲು ತಾಲೂಕಿನ ವಡ್ಡಹಳ್ಳಿ ಬಳಿ ಇರುವ ಮಾರುಕಟ್ಟೆಯಲ್ಲಿ ಈ ರೀತಿ ಮಾರಾಟವಾಗುತ್ತಿದೆ. ಕೆಜಿ ಟೊಮ್ಯಾಟೋ ಕೇವಲ ರೂ. 2ಕ್ಕೆ ಮಾರಾಟಾವಾಗುತ್ತಿದೆ. ಇದರಿಂದ ರೈತರು ಕಂಗಾಲಾಗಿದ್ದಾರೆ.
ಈ ಕಾರಣದಿಂದಾಗಿ ರೈತರು ಟೊಮ್ಯಾಟೋ ಮಾರಾಟ ಮಾಡದೆ ರಸ್ತೆಯಲ್ಲಿ ಎಸೆದು ಹೋಗುತ್ತಿದ್ದಾರೆ. ದಲ್ಲಾಳಿಗಳಿಗೆ ಟೊಮೊಟೊ ಬಾಕ್ಸ್ ಗಳನ್ನು ಹಿಂದಿರುಗಿಸುವ ಉದ್ಧೇಶದಿಂದ ರೈತರು ರಸ್ತೆಯಲ್ಲಿಯೇ ಟೊಮ್ಯಾಟೋ ಸುರಿಯುತ್ತಿದ್ದಾರೆ.
ಇಂದು ಈ ಮಾರುಕಟ್ಟೆಗೆ ರೂ. 30 ಸಾವಿರ ಟೊಮ್ಯಾಟೋ ಬಾಕ್ಸ್ ಗಳು ಬಂದಿದ್ದವು. ಈ ಪೈಕಿ 5 ಸಾವಿರ ಬಾಕ್ಸ್ ಗಳು ರೂ. 3 ರೂಪಾಯಿಯಂತೆ ಮಾರಾಟವಾಗಿವೆ.
ಇನ್ನುಳಿದ 25 ಸಾವಿರ ಟೊಮ್ಯಾಟೋ ಬಾಕ್ಸ್ ಗಳನ್ನು ಕೇವಲ ರೂ. 10 ರಿಂದ 20ಕ್ಕೆ ಕೇಳಿದ ದಲ್ಲಾಳಿಗಳು. ಇದಕ್ಕೆ ಮನನೊಂದು ರಸ್ತೆ ಬದಿ ಸುರಿದು ರೈತರು ಹೋಗುತ್ತಿದ್ದಾರೆ. ಪ್ರತಿಯೊಬ್ಬ ರೈತರು ಒಂದು ಎಕೆರೆಗೆ ರೂ. 3 ಲಕ್ಷ ಖರ್ಚು ಮಾಡಿ ಟೊಮ್ಯಾಟೋ ಬೆಳೆದಿದ್ದಾರೆ. ಆದರೆ, ರೈತರ ಕೈಗೆ ಮಾತ್ರ ಪುಡಿಗಾಸು ಸಿಗುತ್ತಿದೆ. ಹೀಗಾಗಿ ರೈತರ ನೋವನ್ನು ಕೂಡಲೇ ಸರ್ಕಾರ ಆಲಿಸಿ, ಬೆಂಬಲ ಬೆಲೆ ಘೋಷಿಸಬೇಕು ಎಂದು ರೈತರು ಆಗ್ರಹಿಸುತ್ತಿದ್ದಾರೆ.