
ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ಇಲ್ಲಿನ ಸಜ್ಜನ ಜಾತ್ರೆಯ ರಥೋತ್ಸವದ ಗೊಂದಲಕ್ಕೆ ತೆರೆ ಬಿದ್ದಿದೆ. ಜನೆವರಿ 19ರ ನಸುಕಿನ ವೇಳೆ 4.30ಕ್ಕೆ ತೇರನೆಳೆದು ರಥೋತ್ಸವ ಕಾರ್ಯಕ್ರಮವನ್ನು ಸಂಪನ್ನಗೊಳಿಸಲಾಗಿದೆ. ಓಮೈಕ್ರಾನ್ ಹಿನ್ನೆಲೆಯಲ್ಲಿ ಜನಜಂಗುಳಿ ತಡೆಯಲು ಗವಿಮಠ ಹಿಂದಿನ ಸಂಪ್ರದಾಯ ಮುರಿಯದಂತೆ ಸದ್ದುಗದ್ದಲವಿಲ್ಲದೇ ರಥೋತ್ಸವ ಜರುಗಿಸಿ ಮತ್ತೊಮ್ಮೆ ಮಾದರಿ ಮಠ ಎನಿಸಿದೆ.



