ಬೆಳ್ಳಂಬೆಳಿಗ್ಗೆ ಮಟನ್ ಶಾಪ್ ಗಳ ಮೇಲೆ ದಾಳಿ; ಆರು ಜನ ವಶಕ್ಕೆ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ

Advertisement

ಮಾಂಸ ಮಾರಾಟ ಮಾಡದಂತೆ ನೋಟಿಸ್ ನೀಡಿದರೂ ಮಾಂಸ ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ನಗರಸಭೆ ಹಾಗೂ ಪೊಲೀಸರು ದಾಳಿ ಮಾಡಿ 6 ಜನರನ್ನು ವಶಕ್ಕೆ ಪಡೆದಿದ್ದಾರೆ.

ಇಂದು ಮಹಾವೀರ ಜಯಂತಿ ಇರುವ ಹಿನ್ನೆಲೆಯಲ್ಲಿ ಮಾಂಸ ಮಾರಾಟ ಮಾಡದಂತೆ ಎರಡು ದಿನಗಳ ಹಿಂದೆ ಮಾಂಸದ ‌ವ್ಯಾಪಾರಸ್ಥರಿಗೆ ತಿಳಿವಳಿಕೆ ‌ನೀಡಿ ನೋಟಿಸ್ ಕೂಡ ನೀಡಲಾಗಿತ್ತು.

ಆದರೆ ಇಂದು ಬೆಳ್ಳಂಬೆಳಿಗ್ಗೆ ಜವಳಗಲ್ಲಿ ಹಾಗೂ ಸರಾಫ್ ಬಜಾರನಲ್ಲಿ ಮಾಂಸದ ವ್ಯಾಪಾರ ಜೋರಾಗಿತ್ತು. ಇದನ್ನು ಕಂಡ ನಗರಸಭೆ ಅಧಿಕಾರಿಗಳು ಹಾಗೂ ಪೊಲೀಸರು ದಾಳಿ ಮಾಡಿ ಮಾಂಸ ಹಾಗೂ ಆರು ಜನರನ್ನು ವಶಕ್ಕೆ ಪಡೆದಿದ್ದಾರೆ.

ರಾಜ್ಯದಲ್ಲಿ ನಿನ್ನೆ ವೀಕೆಂಡ್ ಕರ್ಫ್ಯೂ ಜಾರಿ ಇದ್ರೂ ಮಟನ್ ಪ್ರಿಯರಿಗೆ ಯಾವುದೇ ಅಡ್ಡಿ ಆತಂಕ ಇರಲಿಲ್ಲ. ಆದರೆ ಇವತ್ತು ಮಹಾವೀರ ಜಯಂತಿ ಹಿನ್ನೆಲೆಯಲ್ಲಿ ಮಾಂಸಹಾರ ಮಾರಾಟಕ್ಕೆ ನಗರಸಭೆ ಅಧಿಕಾರಿಗಳು ಬ್ರೇಕ್ ಹಾಕಿದ್ದರು. ಆದರೂ ನೋಟಿಸ್ ಕೇರ್ ಮಾಡದೇ ಮಾರಾಟಕ್ಕೆ ಮುಂದಾದ ವ್ಯಾಪಾರಸ್ಥರಿಗೆ‌ ಈಗ ಬಿಸಿಮುಟ್ಡಿದೆ.


Spread the love

LEAVE A REPLY

Please enter your comment!
Please enter your name here