ಬ್ಲ್ಯಾಕ್ ಫಂಗಸ್ ಗೆ ರಾಜ್ಯದಲ್ಲಿ ಎಷ್ಟು ಜನ ಬಲಿಯಾಗಿದ್ದಾರೆ ಗೊತ್ತಾ?

0
Spread the love

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

Advertisement

ರಾಜ್ಯ ಸೇರಿದಂತೆ ದೇಶದಲ್ಲಿ ಕೊರೊನಾ ಎರಡನೇ ಅಲೆಯ ಹಾವಳಿ ಹೆಚ್ಚಾಗುತ್ತಿದೆ. ಇದರ ಮಧ್ಯೆ ಬ್ಲ್ಯಾಕ್ ಫಂಗಸ್ ನ ಹಾವಳಿ ಕೂಡ ಹೆಚ್ಚಾಗುತ್ತಿದೆ. ದಿನದಿಂದ ದಿನಕ್ಕೆ ಈ ಫಂಗಸ್ ಗೆ ಜನರು ಬಲಿಯಾಗುತ್ತಿದ್ದಾರೆ.
ಈ ಕುರಿತು ಸ್ವತಃ ಆರೋಗ್ಯ ಸಚಿವ . ಸುಧಾಕರ್ ಅವರೆ ಹೇಳಿದ್ದಾರೆ.

ಇಲ್ಲಿಯವರೆಗೂ ರಾಜ್ಯದಲ್ಲಿ 1,250 ಜನರಲ್ಲಿ ಬ್ಲ್ಯಾಕ್ ಫಂಗಸ್ ಕಾಣಿಸಿಕೊಂಡಿದೆ. ಈ ಪೈಕಿ 39 ಜನರು ಈ ಬ್ಲ್ಯಾಕ್ ಭಂಗಸ್ ಗೆ ಬಲಿಯಾಗಿದ್ದಾರೆ ಎಂದು ಹೇಳಿದ್ದಾರೆ.
ಅಲ್ಲದೇ, ಬ್ಲ್ಯಾಕ್ ಫಂಗಸ್ ಗೆ ಬಲಿಯಾಗಿರುವ ಕುರಿತು ಡೆತ್ ಅಡಿಟ್ ಮಾಡಿ ನಿಖರ ವರದಿ ನೀಡಬೇಕೆಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಕೂಡ ಅವರು ಹೇಳಿದ್ದಾರೆ.

ಈಗಾಗಲೇ ಬ್ಲ್ಯಾಕ್ ಫಂಗಸ್ ಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಇನ್ನೂ ದರ ನಿಗದಿ ಮಾಡಿಲ್ಲ. ಬ್ಲ್ಯಾಕ್ ಫಂಗಸ್ ಔಷಧಿಯನ್ನು ರಾಜ್ಯಕ್ಕೆ ತರಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನ ನಡೆದಿದೆ. ಈಗಾಗಲೇ ಈ ರೋಗದ ಔಷಧಿ ಸಿದ್ಧಪಡಿಸುವ 8 ಕಂಪನಿಗಳ ಜೊತೆಗೆ ಮಾತನಾಡಲಾಗಿದೆ. ಮುಂದಿನ ದಿನಗಳಲ್ಲಿ ಸಾಕಷ್ಟು ಔಷಧಿಗಳನ್ನು ತರೆಯಿಸಿಕೊಂಡು ಜನರಿಗೆ ಇದರಿಂದ ತೊಂದರೆಯಾಗದಂತೆ ನೋಡಿಕೊಳ್ಳುತ್ತೇವೆ ಎಂದು ಅವರು ಹೇಳಿದ್ದಾರೆ.

ಬ್ಲ್ಯಾಕ್ ಫಂಗಸ್ ಕಾಣಿಸಿಕೊಂಡ ನಂತರ ರಾಜ್ಯದಲ್ಲಿ ಬಿಳಿ ಹಾಗೂ ಹಳದಿ ಫಂಗಸ್ ಪ್ರಕರಣಗಳು ಕೂಡ ಕಂಡು ಬಂದಿವೆ. ಇದರ ಮಧ್ಯೆ ಚಿಕ್ಕಮಕ್ಕಳಲ್ಲಿಯೂ ಇದು ಕಂಡು ಬರುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.


Spread the love

LEAVE A REPLY

Please enter your comment!
Please enter your name here