ವಿಜಯಸಾಕ್ಷಿ ಸುದ್ದಿ, ನವದೆಹಲಿ
Advertisement
ಟೋಕಿಯೋ ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಎರಡನೇ ಪದಕ ದೊರೆತಿದ್ದು, ಮಹಿಳಾ ಸಿಂಗಲ್ಸ್ ಬ್ಯಾಡ್ಮಿಂಟನ್‍ನಲ್ಲಿ ಪಿ.ವಿ. ಸಿಂಧು ಕಂಚಿನ ಪದಕ ಪಡೆದಿದ್ದಾರೆ. ನಿನ್ನೆ ನಡೆದ ಸೆಮಿಫೈನಲ್ ನಲ್ಲಿ ಚೀನಾದ ಇನ್ನೋರ್ವ ಆಟಗಾರ್ತಿ ವಿರುದ್ಧ ಸೋತಿದ್ದ ಸಿಂಧು ಕಂಚಿನ ಪದಕಕ್ಕೆ ಇಂದು ನಡೆದ ಪಂದ್ಯದಲ್ಲಿ ಚೀನಾದ ಜಿ. ಬಿಂಗ್ ಜಿಯಾವೋ ವಿರುದ್ಧ 21-13, 21-15 ನೇರ ಸೆಟ್‍ಗಳಿಂದ ಗೆಲುವು ದಾಖಲಿಸಿದ್ದಾರೆ.
ಒಲಿಂಪಿಕ್ಸ್ ನಲ್ಲಿ ಎರಡನೇ ಬಾರಿ ಪದಕಕ್ಕೆ ಮುತ್ತಿಕ್ಕಿರುವ ಪಿ.ವ್ಹಿ.ಸಿಂಧು ರಿಯೋ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದಿದ್ದರು.