ವಿಜಯಸಾಕ್ಷಿ ಸುದ್ದಿ, ಸೌತಾಂಪ್ಟನ್
ಭಾರತೀಯ ಕ್ರಿಕೆಟ್ ತಂಡದಲ್ಲಿ ಸಾಕಷ್ಟು ಪ್ರತಿಭೆ ಉಳ್ಳವರು ಇದ್ದಾರೆ. ಆ ತಂಡದಲ್ಲಿ ಸ್ಫೋಟಕ ಬ್ಯಾಟ್ಸಮನ್ ಗಳು, ಉತ್ತಮ ಬೌಲರ್ ಗಳು ಸೇರಿದಂತೆ ವಿಶ್ವವೇ ತಿರುಗಿ ನೋಡುವಂತಹ ಆಲ್ ರೌಂಡರ್ ಇದ್ದಾರೆ. ರವೀಂದ್ರ ಜಡೇಜಾ ಇದಕ್ಕೆ ದೊಡ್ಡ ಉದಾಹರಣೆ. ಅವರನ್ನು ಇಂಗ್ಲೆಂಡ್ ಆಟಗಾರರು ಮಾದರಿಯಾಗಿ ಇಟ್ಟುಕೊಳ್ಳಬೇಕು ಎಂದು ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ಆಟಗಾರ ಕೇವಿನ್ ಪೀಟರ್ಸನ್ ಇಂಗ್ಲೆಂಡ್ ಆಟಗಾರರಿಗೆ ಕಿವಿ ಮಾತು ಹೇಳಿದ್ದಾರೆ. ಅಲ್ಲದೇ, ಜಡ್ಡುನನ್ನು ಬಾಯಿ ತಂಬಾ ಕೊಂಡಾಡಿದ್ದಾರೆ.
ಐಪಿಎಲ್, ಅಂತಾರಾಷ್ಟ್ರೀಯ ಟಿ20, ಏಕದಿನ ಹಾಗೂ ಟೆಸ್ಟ್ ಕ್ರಿಕೆಟ್ ಸೇರಿದಂತೆ ಎಲ್ಲ ಮಾದರಿಯಲ್ಲಿಯೂ ರವೀಂದ್ರ ಜಡೇಜಾ ಮಿಂಚಿದ್ದಾರೆ. ಅವರು ಎಲ್ಲ ಬಗೆಯ ಆಟದಲ್ಲಿ ಗೆಲುವು ಸಾಧಿಸಿದ್ದಾರೆಯೇ ಹೊರತು, ವಿಫಲರಾಗಿಲ್ಲ. ಆಡಿರುವ ಬಹುತೇಕ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿ ಇಡೀ ವಿಶ್ವದ ಗಮನ ಸೆಳೆದಿದ್ದಾರೆ. ಹೀಗಾಗಿ ಟೀಂ ಇಂಡಿಯಾದ ಖಾಯಂ ಸದಸ್ಯರಾಗಿ ರವೀಂದ್ರ ಜಡೇಜಾ ಉಳಿದಿದ್ದಾರೆ ಎಂದು ಪೀಟರ್ಸನ್ ಹೊಗಳಿದ್ದಾರೆ.
ಜೀವನದಲ್ಲಿ ಕ್ರಿಕೆಟರ್ ಆಗಬೇಕು ಎಂಬ ಗುರಿ ಹೊಂದಿರುವ ಆಟಗಾರರು, ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಕಾಲಿಡುವ ಕ್ರಿಕೆಟರ್ಸ್, ಕೌಂಟಿ ಕ್ರಿಕೆಟಿಗರು ಸೇರಿದಂತೆ ಯಾರೇ ಆದರೂ ರವೀಂದ್ರ ಜಡೇಜಾ ಅವರನ್ನು ಅನುಸರಿಸಬೇಕು. ಜಡೇಜಾ ಅವರ ಆಟದ ರೀತಿ ಗಮನಿಸಿ ಆ ಶೈಲಿ ಪಾಲಿಸಬೇಕು. ಅವರೊಬ್ಬ ಯಂಗ್ ಕ್ರಿಕೆಟರ್ ಗೆ ನಿಜವಾದ ಸೂಪರ್ ಸ್ಟಾರ್ ಎಂದು ಹೊಗಳಿದ್ದಾರೆ.
ರವೀಂದ್ರ ಜಡೇಜಾ ಅವರ ರೀತಿಯ ಎಡಗೈ ಆಲ್ ರೌಂಡರ್ ಇಷ್ಟು ವರ್ಷದ ಇತಿಹಾಸದಲ್ಲಿ ಇಂಗ್ಲೆಂಡ್ ತಂಡಕ್ಕೆ ಸಿಕ್ಕಿಯೇ ಇಲ್ಲ. ಆ ಕೊರಗು ಕೂಡ ನನ್ನೊಂದಿಗೆ ನನ್ನ ತಂಡಕ್ಕೂ ಇದೆ ಎಂದು ಬಣ್ಣಿಸಿದ್ದಾರೆ.
ಪೀಟರ್ಸನ್ ಅವರ ಮಾತನ್ನು ಕೂಡ ಅಲ್ಲಗಳೆಯುವಂತಿಲ್ಲ. ಜಡ್ಡುನ ಆಟವೇ ಅಂಥದ್ದು, ಅವರೊಬ್ಬ ಭಾರತ ಕಂಡ ಉತ್ತಮ ಆಟಗಾರ. ಜಡೇಜಾ ಫಿಟ್ ಆಗಿದ್ದರೆ, ಭಾರತೀಯ ಕ್ರಿಕೆಟ್ ತಂಡದ ಆಟದ ಮುಂದೆ ಬೇರೆ ಆಟಗಾರರ ಆಯ್ಕೆಯೇ ಇರುವುದಿಲ್ಲ. ಜಡೇಜಾ ಗಾಯಗೊಂಡರೆ ಮಾತ್ರ ಬೇರೆ ಆಲ್ ರೌಂಡರ್ ಗಾಗಿ ಆಯ್ಕೆ ತಂಡ ಹುಡುಕಾಟ ನಡೆಸುತ್ತದೆಯೇ ಹೊರತು, ಜಡೇಜಾ ಅವರನ್ನು ಮಾತ್ರ ಮಾತೇ ಇಲ್ಲ.
ಅಭಿಮಾನಿಗಳು ಕೂಡ ಜಡೇಜಾ ಗ್ರೌಂಡ್ ನಲ್ಲಿದ್ದರೆ, ಭಾರತ ಗೆದ್ದೇ ಗೆಲ್ಲುತ್ತದೆ ಎಂಬ ಭರವಸೆಯೊಂದಿಗೆ ಕುಳಿತುಕೊಂಡಿರುತ್ತದೆ. ನಮ್ಮ ಜಡ್ಡು ಅಂದ್ರೆ ಸುಮ್ನೆನಾ?