ವಿಜಯಸಾಕ್ಷಿ ಸುದ್ದಿ, ಧಾರವಾಡ
ಮಹಾಮಾರಿಗೆ 24 ಗಂಟೆಯೊಳಗೆ ತಂದೆ – ಮಗ ಬಲಿಯಾಗಿರುವ ಹೃದಯ ವಿದ್ರಾವಕ ಘಟನೆ ನಗರದಲ್ಲಿ ನಡೆದಿದೆ.
ಸೋಂಕಿನ ಹಿನ್ನೆಲೆಯಲ್ಲಿ ಕಳೆದ ನಾಲ್ಕು ದಿನಗಳ ಹಿಂದೆ ತಂದೆ ಹಾಗೂ ಮಗ ಇಬ್ಬರೂ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಮಹಾಮಾರಿ ಇಬ್ಬರನ್ನೂ ಬಲಿ ಪಡೆದಿದೆ.
ತಂದೆ ರವೀಂದ್ರನಾಥ ವಸ್ತ್ರದ (74) ಮಗ ವಿಶ್ವನಾಥ ವಸ್ತ್ರದ (47) ಸಾವನ್ನಪ್ಪಿರುವ ದುರ್ದೈವಿಗಳು. ಕೊರೊನಾ ಸೋಂಕು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಕಳೆದ ನಾಲ್ಕು ದಿನಗಳ ಹಿಂದೆ ತಂದೆ ಮಗ ಇಬ್ಬರು ಆಸ್ಪತ್ರೆಗೆ ದಾಖಲಾಗಿದ್ದರು.
ತಂದೆ ಹಾಗೂ ಮಗ ಇಬ್ಬರೂ ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಬ್ಬರೂ ಸಾವನ್ನಪ್ಪಿದ್ದಾರೆ. ನಿನ್ನೆ ರಾತ್ರಿ ತಂದೆ ಬಲಿಯಾಗಿದ್ದಾರೆ. ಇಂದು ಬೆಳಿಗ್ಗೆ ಮಗ ಸಾವನ್ನಪ್ಪಿದ್ದಾರೆ.
ಮೃತರಿಬ್ಬರೂ ಕಿರಾಣಿ ವರ್ತಕರಾಗಿದ್ದರು. ತಂದೆ ರವೀಂದ್ರನಾಥ ಧಾರವಾಡ ಕಿರಾಣಿ ವರ್ತಕ ಸಂಘದ ಕಾರ್ಯದರ್ಶಿಯಾಗಿದ್ದರು. ಮಗ ವಿಶ್ವನಾಥ ಕಿರಾಣಿ ಅಂಗಡಿಯೊಂದಿಗೆ ಹಲವು ವ್ಯಾಪಾರಗಳನ್ನು ಮಾಡುತ್ತಿದ್ದರು.