ಮಾನ್ಪಡೆ ನಿಧನ ಎಡಪಂಥೀಯ ಸಂಘಟನೆಗಳಿಗೆ ದೊಡ್ಡ ನಷ್ಟ

0
Spread the love

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಹರಪನಹಳ್ಳಿ
ಭಾರತ ಕಮ್ಯುನಿಸ್ಟ್ ಪಕ್ಷದ (ಮಾರ್ಕ್ಸ್‌ವಾದ) ಹಿರಿಯ ನಾಯಕ ಮಾರುತಿ ಮಾನ್ಪಡೆ ನಿಧನರಾಗಿದ್ದು ಎಡಪಂಥೀಯ ಪಕ್ಷ ಸಂಘಟನೆಗಳಿಗೆ ತುಂಬಲಾಗದ ನಷ್ಟವಾಗಿದೆ ಎಂದು ಮುಖಂಡರು ಶ್ರದ್ಧಾಂಜಲಿ ಸಲ್ಲಿಸಿದರು.
ಸಿಪಿಐ (ಎಂ) ತಾಲ್ಲೂಕು ಕಾರ್ಯದರ್ಶಿ ರೇಣುಕಮ್ಮ ಮಾತನಾಡಿ, ಮಾರುತಿ ಮಾನ್ಪಡೆ ಅವರ ಅಕಾಲಿಕ ಮರಣ ಪಕ್ಷಕ್ಕೆ ಮಾತ್ರವಲ್ಲ, ನಮ್ಮ ಎಲ್ಲ ಎಡಪಂಥೀಯ ಪಕ್ಷ ಸಂಘಟನೆಗಳಿಗೆ ತುಂಬಲಾರದ ನಷ್ಟವಾಗಿದೆ, ಒಬ್ಬ ಅತ್ಯುತ್ತಮ ಬುದ್ಧಿಜೀವಿ ಹೊರಾಟಗಾರರನ್ನು ನನ್ನ ಜೀವಮಾನದಲ್ಲೇ ಕಂಡಿರಲಿಲ್ಲ. ಇವತ್ತು ನನ್ನಂತಹ ಮಹಿಳೆಯವರು ಕೊಮುವಾದಿಗಳಿಂದ ಹದಗೆಟ್ಟ ಸಾಮಾಜಿಕ ವ್ಯವಸ್ಥೆಯೊಳಗೆ ಒಬ್ಬಂಟಿಯಾಗಿ ಧೈರ್ಯದಿಂದ ಬದುಕುವುದನ್ನು ಕಲಿಸಿಕೊಟ್ಟ ಧೀಮಂತ ನಾಯಕ ಎಂದು ಬಣ್ಣಿಸಿದರು.
ಸಿಪಿಐ ತಾಲ್ಲೂಕು ಕಾರ್ಯದರ್ಶಿ ಕೆರೆ ಗುಡಿಹಳ್ಳಿ ಹಾಲೇಶ್ ಮಾತನಾಡಿ, ಹರಪನಹಳ್ಳಿಯಲ್ಲಿ ಅವರು ನಡೆಸಿದ ಹೋರಾಟಗಳ ಸಂದರ್ಭದಲ್ಲಿ ಧೈರ್ಯದಿಂದ ಪಾಲ್ಗೊಂಡಿದ್ದರು. ಸರ್ಕಾರಿ ಹುದ್ದೆಗೆ ರಾಜೀನಾಮೆ ನೀಡಿ, ಹೋರಾಟಕ್ಕಾಗಿ ತಮ್ಮ ಇಡೀ ಬದುಕನ್ನೇ ಮೀಸಲಿಟ್ಟಿದ್ದರು. ಇಂತಹ ನಾಯಕರು ಇವತ್ತಿನ ಸಂದರ್ಭದಲ್ಲಿ ತುಂಬ ವಿರಳ, ನಾವೆಲ್ಲರೂ ಅವರ ಮಾರ್ಗದಲ್ಲಿ ನಡೆಯೋಣ ಎಂದರು.
ಕೆಪಿಆರ್‌ಎಸ್‌ನ ಹುಲಿ ಕಟ್ಟಿ ರಾಜಪ್ಪ, ಬದ್ಯನಾಯ್ಕ, ರಹಮತ್ ಹುಲಿಕಟ್ಟಿ, ಹುಲಿ ಕಟ್ಟಿ ಮೈಲಪ್ಪ, ದುರ್ಗಪ್ಪ, ಎ.ಐ.ವೈ.ಎಫ್. ರಾಜ್ಯ ಕಾರ್ಯದರ್ಶಿ ಸಂತೋಷ ಎಚ್.ಎಂ., ಎ.ಐ.ಎಸ್.ಎಫ್. ರಾಜ್ಯ ಉಪಾಧ್ಯಕ್ಷ ಚಂದ್ರ ನಾಯ್ಕ ಭಾಗಿಯಾಗಿದ್ದರು.
 

Advertisement

Spread the love

LEAVE A REPLY

Please enter your comment!
Please enter your name here