ವಿಜಯಸಾಕ್ಷಿ ಸುದ್ದಿ, ಮುಂಬೈ
Advertisement
ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ದ ದೇಶವ್ಯಾಪಿ ಪ್ರತಿಭಟನೆ ನಡೆಸುತ್ತಿರುವ ಸಾವಿರಾರು ರೈತರು ಶನಿವಾರ ಮಹಾರಾಷ್ಟ್ರದ 21 ಜಿಲ್ಲೆಗಳ ಸಾವಿರಾರು ರೈತರು ನಾಸಿಕ್ ನಲ್ಲಿ ಒಂದಡೆ ಸೇರಿದ್ದು, 180 ಕಿ.ಮೀ.ದೂರದ ರಾಜ್ಯ ರಾಜಧಾನಿ ಮುಂಬೈನತ್ತ ಬೃಹತ್ ಮೆರವಣಿಗೆಯನ್ನು ಆರಂಭಿಸಿದ್ದಾರೆ.
ಧ್ವಜಗಳನ್ನು ಹಾರಿಸುತ್ತಾ, ಬ್ಯಾನರ್ ಗಳನ್ನು ಹಿಡಿದು ಸಾಗರದಂತೆ ಹರಿದುಬರುತ್ತಿರುವ ರೈತರು ನಾಸಿಕ್-ಮುಂಬೈ ಸಂಪರ್ಕಿಸುವ ಕಸಾರಾ ಘಾಟ್ ವಲಯದ ರಸ್ತೆ ಮಾರ್ಗದಲ್ಲೇ ಸಾಗಿಬರುತ್ತಿದ್ದಾರೆ.
ಹಲವಾರು ಸಣ್ಣಪುಟ್ಟ ಸಂಘಟನೆಗಳು ಅಖಿಲ ಭಾರತ ಕಿಸಾನ್ ಸಭಾ ಅಡಿಯಲ್ಲಿ ಒಂದಾಗಿದ್ದು, ಇನ್ನು ಕೆಲವೇ ಗಂಟೆಗಳಲ್ಲಿ ಮುಂಬೈ ತಲುಪಲಿವೆ. ಸೋಮವಾರ ಮುಂಬೈನ ಪ್ರಸಿದ್ಧ ಆಝಾದ್ ಮೈದಾನದಲ್ಲಿ ನಡೆಯುವ ಬೃಹತ್ ರ‌್ಯಾಲಿಯಲ್ಲಿ ಭಾಗವಹಿಸಲಿದ್ದಾರೆ.
ವರದಿ:ಡಾ.ಅಬ್ದುಲ್ ರಜಾಕ್