ವಿಜಯಸಾಕ್ಷಿ ಸುದ್ದಿ, ವಿಜಯನಗರ
Advertisement
ಯಡಿಯೂರಪ್ಪ ದುಡುಕಿನ ನಿರ್ಧಾರ ತೆಗೆದುಕೊಳ್ಳಬೇಡ ಎಂದಿದ್ದಾರೆ. ಬೊಮ್ಮಾಯಿ ಹೇಗೆ ಸಮಸ್ಯೆ ಬಗೆಹರಿಸುತ್ತಾರೆ ಕಾದು ನೋಡೋಣ ಎಂದು ಪ್ರವಾಸೋದ್ಯಮ ಸಚಿವ ಆನಂದ ಸಿಂಗ್ ಹೇಳಿದರು.
ವಿಜಯನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಆಶೀರ್ವಾದ ಪಡೆಯಲು ಬೆಂಗಳೂರಿಗೆ ಹೋಗಿದ್ದೆ. ರಾಜಕೀಯ ಮಾತನಾಡಲು ಹೋಗಿರಲಿಲ್ಲ ಎಂದರು.
ವಿಜಯನಗರ ಜನರ ಋಣ ತಿರಿಸಲು ಆಗೋದಿಲ್ಲ. ಜಿಲ್ಲೆ ಮಾಡಿದ ಸಾಧನೆ ತೃಪ್ತಿ ಇದೆ.
ಯಡಿಯೂರಪ್ಪನವರು ಜಿಲ್ಲೆ ಘೋಷಣೆ ಮಾಡಿದರು. ಅವರ ಋಣ ತೀರಿಸಕ್ಕಾಗಲ್ಲ ಎಂದು ಹೇಳಿದ ಅವರು, ವಿಜಯನಗರ ಜಿಲ್ಲೆಯಲ್ಲಿ ಮೊದಲ ಬಾರಿ ಧ್ವಜಾರೋಹಣ ಮಾಡುತ್ತಿದ್ದೇನೆ ಎಂಬ ಖುಷಿ ಇದೆ ಎಂದರು.
ಸಚಿವ ಸ್ಥಾನ ಬದಲಾವಣೆ ಕುರಿತು ಪ್ರತಿಕ್ರಿಯಿಸಿದ ಅವರು, ಯಾರಿಗೆ ಏನು ಹೇಳಬೇಕು ಹೇಳಿದ್ದಾಗಿದೆ. ದೆಹಲಿಗೆ ಹೋಗುತ್ತೇನೆ ಎಂದು ಹೇಳಿಲ್ಲ. ಹೋಗೋದು ಇಲ್ಲ ಎಂದು ಹೇಳಿದರು.