ವಿಜಯಸಾಕ್ಷಿ ಸುದ್ದಿ, ಗದಗ:
Advertisement
ಜಿಲ್ಲೆಯ ಶಿರಹಟ್ಟಿ ತಾಲ್ಲೂಕಿನ ರಣತೂರ ಗ್ರಾಮ ಪಂಚಾಯತಿಯ 2ನೇ ವಾರ್ಡ್ ಗೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿಯ ಅಲ್ಪಸಂಖ್ಯಾತ ಘಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರೀಫಸಾಬ್ ರಾಜೇಸಾಬ್ ಛಬ್ಬಿ 126 ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ.
ಶರೀಫಸಾಬ್ ಛಬ್ಬಿ 391ಮತಗಳನ್ನು ಪಡೆದರೆ,
ಪ್ರತಿಸ್ಪರ್ಧಿ ಅಜ್ಜಪ್ಪ ಕೃಷ್ಣಪ್ಪ ಛಬ್ಬಿ 265 ಮತಗಳನ್ನು ಪಡೆದು ಪರಾಭವಗೊಂಡರು.
ಚುನಾವಾಣಾಧಿಕಾರಿಯಾಗಿದ್ದ ತಹಶೀಲ್ದಾರ ಕಲ್ಲಗೌಡ ಪಾಟೀಲ್ ಗೆಲುವು ಸಾಧಿಸಿದ ಶರೀಫಸಾಬ್ ಛಬ್ಬಿಗೆ ಪ್ರಮಾಣಪತ್ರ ವಿತರಣೆ ಮಾಡಿದರು.
ಹಿಂದುಳಿದ ಎ ವರ್ಗಕ್ಕೆ ಮೀಸಲಿದ್ದ ಸದಸ್ಯ ಸ್ಥಾನಕ್ಕೆ ಕಳೆದ ಶುಕ್ರವಾರ ಮೇ 20 ರಂದು ಮತದಾನ ನಡೆದಿತ್ತು.