ವಿಜಯಸಾಕ್ಷಿ ಸುದ್ದಿ, ಕಲಬುರಗಿ
ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಕೋವಿಡ್ ಲಸಿಕೆ ಪಡೆಯಲು ಜನ ಹಿಂದೇಟು ಹಾಕುತ್ತಿರುವ ಹಿನ್ನೆಲೆಯಲ್ಲಿ ಮೊಬೈಲ್ ವ್ಯಾಕ್ಸಿನೇಷನ್ ಗೆ ಜಿಲ್ಲಾಡಳಿತ ಮುಂದಾಗಿದೆ.
ಮೊಬೈಲ್ ವ್ಯಾಕ್ಸಿನೇಷನ್ ಗಾಗಿಯೇ ಎರಡು ಸಾರಿಗೆ ಬಸ್ ಗಳನ್ನು ಸಿದ್ದಪಡಿಸಿದ್ದು, ವ್ಯಾಕ್ಸಿನ್ ಬಸ್ ಗೆ ಚಾಲನೆ ಸಿಕ್ಕಿದೆ. ಎನ್ ಇಕೆಎಸ್ ಆರ್ ಟಿಸಿ ಅಧ್ಯಕ್ಷ ರಾಜಕುಮಾರ ಪಾಟೀಲ್ ತೆಲ್ಕೂರ್, ಈ ವಿಶೇಷ ಮೊವೈಲ್ ವ್ಯಾಕ್ಸಿನ್ ಬಸ್ ಗೆ ಚಾಲನೆ ನೀಡಿದ್ದಾರೆ.
ಬಸ್ ನಲ್ಲಿ ನೋಂದಣಿ, ಲಸಿಕೆ ಹಾಕುವ ಹಾಗೂ ನಿಗಾ ಕೊಠಡಿಗಳನ್ನು ಸಿದ್ಧಪಡಿಸಲಾಗಿದೆ. ಜೊತೆಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದ್ದು, ಮೊಬೈಲ್ ವ್ಯಾಕ್ಸಿನ್ ಬಸ್ ನಲ್ಲಿ ಆರು ಜನ ಆರೋಗ್ಯ ಸಿಬ್ಬಂದಿ ವ್ಯಾಕ್ಸಿನೇಷನ್ ಕರ್ತವ್ಯ ನಿರ್ವಹಿಸಲಿದ್ದಾರೆ.
ಈ ಬಸ್ ಇಂದಿನಿಂದ ಅಫಜಲಪುರ, ಆಳಂದ ತಾಲೂಕಿನ ಹಳ್ಳಿಗಳಲ್ಲಿ ಮೊಬೈಲ್ ವ್ಯಾಕ್ಸಿನ್ ಬಸ್ ಸಂಚರಿಸಲಿದೆ. ಈ ವ್ಯಾಕ್ಸಿನ್ ಬಸ್ ಮೂಲಕ ಗ್ರಾಮೀಣ ಭಾಗದಲ್ಲಿ ಲಸಿಕೆ ಆರಂಭವಾಗಲಿದೆ. ಆ ನಂತರ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿಯೂ ಮೊಬೈಲ್ ವ್ಯಾಕ್ಸಿನ್ ಬಸ್ ಸಂಚಾರ ಮಾಡಿ ಜನರಿಕೆ ಲಸಿಕೆ ವಿತರಣೆ ಮಾಡಲಿದೆ.
ಈ ಬಸ್ ಮೂಲಕ ಶೇ. 100ರಷ್ಟು ವ್ಯಾಕ್ಸಿನೇಷನ್ ಗೆ ಜಿಲ್ಲಾಡಳಿತ ಮುಂದಾಗಿದೆ. ಇದ್ದು ರಾಜ್ಯದಲ್ಲಿಯೇ ಕಲಬುರಗಿಯಲ್ಲಿ ಹೊಸ ಪ್ರಯತ್ನ. ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ಕೋರಿಕೆ ಮೇರೆಗೆ ಆಸ್ಪತ್ರೆ ಮಾದರಿಯಲ್ಲಿಯೇ ವಿಶೇಷ ವಿನ್ಯಾಸದ ಎರಡು ಬಸ್ ಸಿದ್ದಪಡಿಸಲಾಗಿದೆ. ಇದು ರಾಜ್ಯದಲ್ಲಿಯೇ ಮೊದಲ ಪ್ರಯೋಗ.